ನವದೆಹಲಿ: 2 ದಿನಗಳ ಉಕ್ರೇನ್ ಮತ್ತು ಪೋಲೆಂಡ್ ಪ್ರವಾಸ ಯಶಸ್ವಿಯಾಗಿ ಮುಗಿಸಿ ಪ್ರಧಾನಿ ಮೋದಿ (PM Narendra Modi) ಶನಿವಾರ (ಆ.24) ಮಧಾಹ್ನ ದೆಹಲಿಯ ಪಾಲಂ ವಿಮಾನ (Palam Airport) ನಿಲ್ದಾಣಕ್ಕೆ ಬಂದಿಳಿದರು.
ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ (Ukraine)ನೀಡಿದ ಹಾಗೂ 45 ವರ್ಷಗಳ ಬಳಿಕ ಪೋಲೆಂಡ್‌ಗೆ (Poland) ನೀಡಿದ ಭೇಟಿ ಇದಾಗಿತ್ತು.ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬೆಂಗಳೂರಿನ ಇಸ್ಕಾನ್ ಟೆಂಪಲ್ ಬಳಿ ಸಂಚಾರ ಮಾರ್ಗದಲ್ಲಿ ಬದಲಾವಣೆ
Advertisement
Advertisement
ಪ್ರಧಾನಿ ಮೋದಿ ಉಕ್ರೇನ್ ಭೇಟಿ ನೀಡಿ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಯವರನ್ನು ಭೇಟಿ ಮಾಡಿದರು. ಅವರ ಜೊತೆ ಮಾತುಕತೆ ನಡೆಸಿದರು. ದ್ವಿಪಕ್ಷೀಯ ವಿಚಾರದ ಕುರಿತು ಚರ್ಚಿಸಿದ ಅವರು, ಸಮುದಾಯ ಅಭಿವೃದ್ಧಿ ಯೋಜನೆಗಳು, ಔಷಧ ನಿಯಂತ್ರಣ ಮಾನದಂಡಗಳು, ಸಾಂಸ್ಕೃತಿಕ ವಿನಿಮಯ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ನಾಲ್ಕು ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
Advertisement
Advertisement
ಜಾಗತಿಕ ವಿಷಯಗಳ ಬಗ್ಗೆ ಕುರಿತು ಮಾತನಾಡಿ, ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಗಳು ಸೇರಿದಂತೆ ಹಿತಾಸಕ್ತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಉಕ್ರೇನ್ ಮತ್ತು ರಷ್ಯಾ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಪರಿಹರಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ಶಾಂತಿಯನ್ನು ತರಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳಲ್ಲಿ ಭಾರತ ಸಕ್ರೀಯ ಪಾತ್ರವನ್ನು ವಹಿಸಲು ಸಿದ್ಧವಾಗಿದೆ ಎಂದು ಮೋದಿ ಭರವಸೆ ನೀಡಿದರು.ಇದನ್ನೂ ಓದಿ: ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಕನ್ನಡದ ಸೂಪರ್ ಸ್ಟಾರ್ ಫಿಕ್ಸ್
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಕೊನೆಗೊಳಿಸುವ ಪ್ರಯತ್ನದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು. ಕೀವ್‌ನಲ್ಲಿ (kyiv) ಮಾತಾನಾಡಿದ ಮೋದಿ ಝೆಲೆನ್ಸ್ಕಿಯವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.