ಕಲಬುರಗಿ: ಮಕ್ಕಳ ಮದುವೆ ಬಂದರೆ ಪೋಷಕರು ಮೊದಲು ಮಾಡುವ ಕೆಲಸ ಆಮಂತ್ರಣ ಪತ್ರಿಕೆ ತಯಾರು ಮಾಡುವುದು. ಇನ್ನೂ ಕೆಲವರು ತಮ್ಮ ಮಕ್ಕಳ ಮದುವೆಯ ಆಮಂತ್ರಣ ಪತ್ರಿಕೆ ಭಿನ್ನವಾಗಿರಬೇಕು ಮತ್ತು ಆಕರ್ಷಣಿಯವಾಗಿರಬೇಕು ಎಂದು ಯೋಚಿಸ್ತಾರೆ. ಅಂತೆಯೇ ಕಲಬುರಗಿ ನಗರದ ವ್ಯಕ್ತಿಯೊಬ್ಬರು ತಮ್ಮ ಮಕ್ಕಳ ಮದುವೆಯ ಕರೆಯೋಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂದೇಶಗಳನ್ನು ಮುದ್ರಿಸಿದ್ದಾರೆ.
ನಗರದ ನಿವಾಸಿ ಸೋಮಶೇಖರ್ ರೆಡ್ಡಿ ಎಂಬವರು ಅವರ ಪುತ್ರಿಯ ಲಗ್ನಪತ್ರಿಕೆಯನ್ನು ಮೋದಿಗಾಗಿಯೇ ಮೀಸಲಿಟಿದ್ದಾರೆ. ಇಡೀ ಆಮಂತ್ರಣ ಪತ್ರದಲ್ಲಿ ಮೋದಿಯವರ ಬೇಟಿ ಪಡಾವೋ ಬೇಟಿ ಬಚಾವೋ, ಇಂಡಿಯಾ ಕೋ ಆಗೇ ಬಡಾವೋ ಎಂಬ ಸಂದೇಶಗಳನ್ನು ಮುದ್ರಿಸಿದ್ದಾರೆ. ಅದೇ ರೀತಿ ಅವರ ಪುತ್ರ ಪ್ರಕಾಶ ರೆಡ್ಡಿ ಲಗ್ನಪತ್ರಿಕೆಯಲ್ಲಿ ಮೋದಿಯವರ ಜನೌಷಧಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಸೋಮಶೇಖರ್ ರೆಡ್ಡಿ ಅವರು ಮುದ್ರಿಸಿದ ಪತ್ರಿಕೆಯನ್ನು ನೋಡಿದ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ತಿಂಗಳು ಮೇ. 12 ರಂದು ಪುತ್ರಿ ಮತ್ತು ಮೇ 22 ರಂದು ಪುತ್ರನ ಮದುವೆ ನಡೆಯಲಿದೆ.
Touched by how citizens are spreading good message of affordable healthcare via wedding invitation @pmbjp_bppi #JanAushadhi @narendramodi pic.twitter.com/g9eb9iyMBz
— Ananthkumar (@AnanthKumar_BJP) May 9, 2017
One More @PMOIndia @narendramodi #PradanMantri #JanAushadhi Awareness Through #wedding #invitation pic.twitter.com/X7S7zeXbo5
— Dattatreya C Patil (@AppugoudaPatil) May 9, 2017