ಕೊಪ್ಪಳ: ಇಂದು ಭತ್ತದ ನಾಡು ಗಂಗಾವತಿಗೆ ಪ್ರಧಾನಿ ಮೋದಿ ಅವರು ಭೇಟಿ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹನುಮ ಮಾಲಾಧಾರಿಗಳು ಅವರಿಗಾಗಿ ಬೆಳ್ಳಿ ಗದೆ ಉಡುಗೊರೆ ಕೊಡುತ್ತಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಕೊಡಲು 1,650 ಗ್ರಾಂ. ಬೆಳ್ಳಿ ಗದೆ ಗಿಫ್ಟ್ ಈಗಾಗಲೇ ಸಿದ್ಧವಾಗಿದೆ. ಈ ಗದೆಯನ್ನು ಕೊಲ್ಲಾಪೂರದಲ್ಲಿ ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೇ ಹನುಮ ಮಾಲಾಧಾರಿಗಳು ಗದೆಗೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಪ್ರಧಾನಿ ಮೋದಿ ಗೆದ್ದು ಬರಲಿ ಎಂದು ವಿಶೇಷ ಪೂಜೆ ಮಾಡಿಸಿದ್ದಾರೆ.
Advertisement
Advertisement
ಹನುಮ ಹುಟ್ಟಿದ ಸ್ಥಳ ಎಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಹೆಸರಾಗಿದೆ. ಹೀಗಾಗಿ ಹನುಮ ಹುಟ್ಟಿದ ನಾಡು ಹಿನ್ನೆಲೆಯಲ್ಲಿ ಮೋದಿ ಅವರಿಗೆ ಬೆಳ್ಳಿ ಗದೆ ಗಿಫ್ಟ್ ಕೊಡಲಾಗುತ್ತಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ಹನುಮ ಮಾಲಾಧಾರಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ.
Advertisement
ಇಂದು ಮಧ್ಯಾಹ್ನ ಮೂರು ಗಂಟೆಗೆ ಗಂಗಾವತಿಯ ಕನಕಗಿರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಸಂಸದ ಸಂಗಣ್ಣ ಕರಡಿ ಪರ ಮತಯಾಚನೆ ಮಾಡಲಿದ್ದಾರೆ. ಸುಮಾರು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಗಳಿವೆ. ಹೀಗಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜನೆ ಮಾಡಲಾಗಿದೆ.
Advertisement
ಈ ಹಿಂದೆ ಕೇಂದ್ರ ಹಣಕಾಸು ರಾಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಈ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ್ದರು.