ಕಾರವಾರ: ಮಂಗಳೂರಿನಿಂದ (Mangaluru) ಗೋವಾ (Goa) ಮಡಗಾಂವ್‌ವರೆಗೆ ಸಂಚರಿಸುವ ವಂದೇ ಭಾರತ್ ರೈಲಿಗೆ (Vande Bharat Train) ನರೇಂದ್ರ ಮೋದಿಯವರು (Narendra Modi) ಚಾಲನೆ ನೀಡಿದ್ದು, ದಕ್ಷಿಣದಿಂದ ಉತ್ತರ ಕರಾವಳಿಯನ್ನು ಸಂಪರ್ಕಿಸುವ ಕರ್ನಾಟಕದ ನಾಲ್ಕನೇ ರೈಲು ಇದಾಗಿದೆ. ಮುಂಬೈ, ಗೋವಾ, ಕರ್ನಾಟಕ ಕರಾವಳಿ, ಕೇರಳ ಭಾಗಕ್ಕೆ ಇದು ಅತೀ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುತ್ತದೆ.
ಸಮಯ ಏನು?
ವಂದೇ ಭಾರತ್ ರೈಲು ವಾರದ ಆರು ದಿನ ಸಂಚರಿಸಲಿದ್ದು, ಪ್ರತಿ ದಿನ ಬೆಳಗ್ಗೆ 8:30ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1:15ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ನಂತರ ಸಂಜೆ 6:10ಕ್ಕೆ ಮಡಗಾಂವ್‌ನಿಂದ ಹೊರಟರೆ ರಾತ್ರಿ 10:45 ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲು 530 ಆಸನಗಳನ್ನು ಹೊಂದಿದೆ. ಇದನ್ನೂ ಓದಿ: ಜ.14 ರಿಂದ ದೇಶದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ: ಮೋದಿ ಕರೆ
Advertisement
ತಲುಪುವ ಸಮಯ ಎಷ್ಟು?
ಈ ರೈಲು ಒಟ್ಟು 319 ಕಿಲೋಮೀಟರ್ ಸಂಚಾರ ಮಾಡಲಿದ್ದು, 4:35 ನಿಮಿಷದಲ್ಲಿ ತನ್ನ ಗುರಿ ತಲುಪುತ್ತದೆ. ಈಗಿರುವ ಎಕ್ಸ್‌ಪ್ರೆಸ್ ರೈಲಿಗಿಂತ 1 ಗಂಟೆಗೂ ಹೆಚ್ಚು ಸಮಯ ವೇಗದಲ್ಲಿ ಗುರಿ ಮುಟ್ಟುತ್ತದೆ. ಇದನ್ನೂ ಓದಿ: ಭಾನುವಾರದಿಂದ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಬಂದ್ – ಸೆಕ್ಷನ್ 144 ಜಾರಿ
Advertisement
Advertisement
ದರ ಎಷ್ಟು?
ವಂದೇ ಭಾರತ್ ರೈಲಿನ ಸಿ.ಸಿ ಕ್ಲಾಸ್ ಟಿಕೆಟ್‌ಗೆ 985 ರೂ.ಗಳಾಗಿದ್ದು, ಇ.ಸಿ ಕ್ಲಾಸ್ ಟಿಕೆಟ್‌ಗೆ 1,955 ರೂ.ಗಳಿವೆ. ಎಕ್ಸ್‌ಪ್ರೆಸ್ ರೈಲಿಗೆ ಹೋಲಿಸಿದರೆ ವಂದೇ ಭಾರತ್ ರೈಲಿನ ದರ ದುಪ್ಪಟ್ಟಿದೆ. ಇದನ್ನೂ ಓದಿ: ವಿಕ್ರಂ ಸಿಂಹ ಬಂಧನದಿಂದ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ – ಕಾಂಗ್ರೆಸ್ ಟ್ವೀಟ್
Advertisement
ಲಾಭ ಏನು?
ಮುಂಬೈ/ಕೇರಳ/ಗೋವಾದಿಂದ ಮಂಗಳೂರು, ಕಾರವಾರ, ಉಡುಪಿ, ಕೇರಳಗೆ ತೆರಳುವವರಿಗೆ ಸಮಯ ಉಳಿತಾಯ ಆಗಲಿದೆ. ಇನ್ನು ಗೋವಾ, ಕರ್ನಾಟಕ, ಕೇರಳ ಭಾಗದ ಪ್ರವಾಸೋದ್ಯಮಕ್ಕೆ ಅನುಕೂಲ ಆಗಲಿದೆ. ಉತ್ತಮ ಸೌಲಭ್ಯದ ಜೊತೆ ಶುಚಿತ್ವ, ಭದ್ರತೆ, ಪರಿಸರ ಸೌಂದರ್ಯ ಸವಿಯುವವರಿಗೆ ಆರಾಮದಾಯಕ ಪ್ರಯಾಣ ಇದಾಗಿದೆ. ಕಾರವಾರ ಭಾಗದಿಂದ ಉಡುಪಿ, ಮಂಗಳೂರು ಭಾಗದಲ್ಲಿ ವೈದ್ಯಕೀಯ ಸೇವೆಗೆಂದು ತುರ್ತು ಹೋಗುವವರಿಗೆ ಈ ರೈಲು ಅನುಕೂಲಕರವಾಗಿದೆ. ಇದನ್ನೂ ಓದಿ: ನಿಗಮ ಮಂಡಳಿ ನೇಮಕದಲ್ಲಿ ಶಾಸಕರ ಸಂಖ್ಯೆಯಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ: ಡಿಕೆಶಿ
ನಷ್ಟ ಏನು?
ಕಾರವಾರ, ಉಡುಪಿಯಲ್ಲಿ ಮಾತ್ರ ವಂದೇ ಭಾರತ್ ರೈಲು ನಿಲ್ದಾಣ ಇರುವ ಕಾರಣ ಕಾರವಾರದ ಪ್ರವಾಸೋದ್ಯಮಕ್ಕೆ ಸಹಾಯ ಆಗದು. ಏಕೆಂದರೆ ಕಾರವಾರದಲ್ಲಿ ಇಳಿದು ಜಿಲ್ಲೆಯ ಬೇರೆ ಸ್ಥಳಗಳಿಗೆ ತೆರಳಲು ಲೋಕಲ್ ರೈಲಿನಲ್ಲಿ ತೆರಳಿದಷ್ಟು ಸಮಯ ಬೇಕಾಗುತ್ತದೆ. ಕುಮಟಾ, ಮುರುಡೇಶ್ವರ ಭಾಗದ ಪ್ರವಾಸೋದ್ಯಮಕ್ಕೆ ಸಹಕಾರಿಯಲ್ಲ. ಇನ್ನು ದರ ದುಪ್ಪಟ್ಟು ಇರುವುದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ತುಟ್ಟಿಯಾಗಿದೆ. ಉಡುಪಿ, ಮಂಗಳೂರು, ಗೋವಾ ರಾಜ್ಯಕ್ಕೆ ಹೆಚ್ಚು ಉಪಯೋಗವಾಗಲಿದೆ. ಇದನ್ನೂ ಓದಿ: ನೆಲದ ಕಾನೂನು ಎಲ್ಲರಿಗೂ ಒಂದೆ: ಪ್ರತಾಪ್ ಸಿಂಹ ಸಹೋದರನ ಬಂಧನಕ್ಕೆ ಈಶ್ವರ್ ಖಂಡ್ರೆ ಪ್ರತಿಕ್ರಿಯೆ