ತುಮಕೂರು: ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುತ್ತೇನೆ ಎಂದಿದ್ದ ಅರ್ಚಕರೊಬ್ಬರು ವಾಪಸ್ ಹಿಂದೂ ಧರ್ಮಕ್ಕೆ ಬಂದಿರುವ ಘಟನೆ ತುಮಕೂರು ಗ್ರಾಮಾಂತರ ಹೀರೇಹಳ್ಳಿಯಲ್ಲಿ ನಡೆದಿದೆ.
ಹೀರೇಹಳ್ಳಿಯ ಓಂಕಾರೇಶ್ವರ ದೇವಸ್ಥಾನದ ಅರ್ಚಕ ಎಚ್. ಆರ್. ಚಂದ್ರಶೇಖರಯ್ಯ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದೇನೆ. ಹೆಸರನ್ನು ಮುಬಾರಕ್ ಪಾಷಾ ಎಂದು ಬದಲಾಯಿಸಿಕೊಂಡಿದ್ದೇನೆ ಎಂದು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿದ್ದರು.
Advertisement
Advertisement
ಮತಾಂತರಕ್ಕೆ ಯತ್ನಿಸುವ ಮೊದಲಿನಿಂದಲೂ ಮುಸ್ಲಿಂ ಸಮುದಾಯದ ಏರಿಯಾದಲ್ಲೇ ಮನೆಕಟ್ಟಿಕೊಂಡಿದ್ದ ಇವರು ತುಮಕೂರು ಗ್ರಾಮಾಂತರದ ಜೆಡಿಎಸ್ ಮುಖಂಡ ತನ್ವಿರ್ ಸೇರಿದಂತೆ ಹಲವು ಮುಖಂಡರ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದರು. ಹಾಗಾಗಿ ಮಸೀದಿಗೆ ಹೋಗಿ ಮತಾಂತರವಾಗಲು ನಿರ್ಧರಿಸಿದ್ದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ನವಜೋಡಿಗೆ ಸಾವರ್ಕರ್ ಫೋಟೋ ಗಿಫ್ಟ್
Advertisement
ಮತಾಂತರ ಯತ್ನದ ಸುದ್ದಿ ಕೇಳುತ್ತಿದ್ದಂತೆ ಮಾಜಿ ಸಚಿವ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಮನೆಗೆ ದೌಡಾಯಿಸಿದ್ದರು. ಅದಾದ ಬಳಿಕ ಸೊಗಡು ಶಿವಣ್ಣರ ಮನವೊಲಿಕೆ ಹಾಗೂ ಮುಂಜಿಗೆ ಅಂಜಿ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.
Advertisement
ಈ ಬಗ್ಗೆ ಮಾತನಾಡಿರುವ ಚಂದ್ರಶೇಖರ್, ಸಹೋದರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿದ್ದೆ. ಯಾರೂ ನನ್ನ ಸಹಾಯಕ್ಕೆ ಬರುವುದಿಲ್ಲ. ಶವ ಸಂಸ್ಕಾರ ಮಾಡುವುದಿಲ್ಲ ಎಂದು ಮನನೊಂದು ಕಾನೂನು ಪ್ರಕಾರವಾಗಿಯೇ ಮತಾಂತರ ಆಗಲು ಬಯಸಿದ್ದೆ. ಆದರೆ ಮುಂಜಿ ಮಾಡಿದರೆ ಮಾತ್ರ ಮುಸ್ಲಿಮರಲ್ಲಿ ಶವ ಸಂಸ್ಕಾರ ಮಾಡಲಾಗುತ್ತದೆ. ನನಗೆ ಸಕ್ಕರೆ ಕಾಯಿಲೆ ಇರುವುರಿಂದ ಮುಂಜಿ ಮಾಡಲು ನಾನು ಹೆದರಿದ್ದೆ. ಇದರಿಂದಾಗಿ ಮತಾಂತರವಾಗಿಲ್ಲ. ಇನ್ನೂ ಮುಂದು ಮತಾಂತರಕ್ಕೆ ಪ್ರಯತ್ನಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ- ಶಿರಚ್ಛೇದನ ಮಾಡುವುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್