ಹುಬ್ಬಳ್ಳಿ: ಪೂಜೆ ವಿಷಯಕ್ಕೆ ಗಲಾಟೆ ನಡೆದು ದೇವಸ್ಥಾನದಲ್ಲಿಯೇ (Temple) ಗ್ರಾಮಸ್ಥರು (Villagers) ಅರ್ಚಕನನ್ನು (Priest) ಥಳಿಸಿದ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.
ಹುಬ್ಬಳ್ಳಿ (Hubballi) ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿರುವ ಬಸವಣ್ಣ ದೇವಸ್ಥಾನದ ಅರ್ಚಕ ಪ್ರಕಾಶ್ ಕುಂದಗೋಳಮಠ ಮತ್ತು ಗ್ರಾಮಸ್ಥರ ನಡುವೆ ಪೂಜೆಯ ವಿಚಾರವಾಗಿ ಗಲಾಟೆ ನಡೆದಿದೆ. ಗ್ರಾಮದ ಪ್ರಕಾಶ್ ಕುಂದಗೋಳಮಠ ಬಸವಣ್ಣ ದೇವಸ್ಥಾನದ ಅರ್ಚಕರಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅರ್ಚಕನ ನಡವಳಿಕೆಯಲ್ಲಿ ಬದಲಾವಣೆಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟು ಹೊಸ ಅರ್ಚಕರ ನೇಮಕಕ್ಕೆ ಚಿಂತನೆ ನಡೆಸಿದ್ದರು.
Advertisement
Advertisement
ಗ್ರಾಮಸ್ಥರ ಈ ನಿರ್ಧಾರಕ್ಕೆ ಪ್ರಕಾಶ್ ಒಪ್ಪಿಗೆ ನೀಡಿರಲಿಲ್ಲ. ಈ ವಿಚಾರಕ್ಕೆ ದೇವಸ್ಥಾನ ಆವರಣದಲ್ಲಿ ಗಲಾಟೆ ಆರಂಭವಾಗಿ, ಜಗಳ ತಾರಕಕ್ಕೇರಿ ಅರ್ಚಕ ಪ್ರಕಾಶ್‌ಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಮ್ಮ ತಂದೆಯನ್ನು ಬಿಡಿಸಲು ಮುಂದಾದ ಅರ್ಚಕನ ಮಗನಿಗೂ ಗ್ರಾಮಸ್ಥರು ಥಳಿಸಿದ್ದಾರೆ. ಇದನ್ನೂ ಓದಿ: 10 ವರ್ಷದ ಫೀಸ್ ಕಟ್ಟೋಕೆ ಶಾಲೆಗಳಿಂದ ಆಫರ್ – ನಯಾ ಪ್ಲ್ಯಾನ್‍ಗೆ ಪೋಷಕರು ಕಂಗಾಲು
Advertisement
ಗ್ರಾಮಸ್ಥರು ಅರ್ಚಕನ ಮೇಲೆ ನಡೆಸಿರುವ ಹಲ್ಲೆಯನ್ನು ನೆರೆದಿದ್ದವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k