ಬೆಳಗಾವಿ: ಜಿಲ್ಲೆಯಲ್ಲಿ ಮೌಢ್ಯಾಚರಣೆ ಇನ್ನೂ ಜೀವಂತವಾಗಿದೆ. ಇದಕ್ಕೆ ಸಾಕ್ಷಿಯೆನ್ನುವಂತೆ 12 ರಿಂದ 15 ಅಡಿ ಎತ್ತರದಿಂದ ಮಕ್ಕಳನ್ನು ಪೂಜಾರಿ ಎಸೆಯುವ ಆಚರಣೆ ಇಲ್ಲಿನ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಭೀರೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಯುಗಾದಿ ಹಬ್ಬದ ದಿನವೇ ಅಮಾನವಿಯ ಘಟನೆ ನಡೆದಿದ್ದು, ಘಟನೆ ನಡೆದು 48 ಗಂಟೆ ಕಳೆದರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಪ್ರಜ್ಞಾವಂತ ನಾಗರಿಕರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಗಂಡು ಮಕ್ಕಳಾದ್ರೆ ಇಲ್ಲವೇ ಕುಟುಂಬಕ್ಕೆ ಒಳ್ಳೆಯದನ್ನ ಬಯಸಿ ಹರಕೆ ಹೊತ್ತಿದ್ದರೆ ಚಿಕ್ಕ ಮಕ್ಕಳನ್ನು 12 ರಿಂದ 15 ಅಡಿ ಎತ್ತರದಿಂದ ಎಸೆಯುವ ಅಂಧಾಚರಣೆಗೆ ಗ್ರಾಮಸ್ಥರು ಮೊರೆ ಹೋಗಿದ್ದಾರೆ. 1-5 ವರ್ಷದೊಳಗಿನ ಮಕ್ಕಳನ್ನು ದೇವಸ್ಥಾನದ ಮೇಲಿಂದ ಕೆಳಕ್ಕೆ ಎಸೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಅಥಣಿ ತಾಲೂಕಾಡಳಿತ ಮಾತ್ರ ಇನ್ನು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಕಿರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೂಡಲೇ ಬೆಳಗಾವಿ ಜಿಲ್ಲಾಡಳಿತ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.