– ಹಣ್ಣು, ತರಕಾರಿ ಆರ್ಡರ್‍ಗೆ ಹಾಪ್‍ಕಾಮ್ಸ್ ನಿಂದ ಆನ್‍ಲೈನ್ ಸೇವೆ
ಬೆಂಗಳೂರು: ಬೇಸಿಗೆಯ ಬಿಸಿಯ ಜೊತೆ ಈ ಬಾರಿ ತರಕಾರಿಯೂ ಕೈಸುಡಲಿದೆ. ಫೆಬ್ರವರಿ ಮೊದಲ ವಾರದಲ್ಲಿಯೇ ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ದರ ಏರಿಕೆ ಆಗಲಿದೆ ಅಂತಾರೆ ಹಾಪ್ ಕಾಮ್ಸ್ ಅಧಿಕಾರಿಗಳು.
ಹಾಗಿದ್ರೆ ಈ ಹಿಂದೆ ಎಷ್ಟಿತ್ತು ಈಗ ಎಷ್ಟು ಏರಿಕೆ ಆಗಿದೆ ಅಂತಾ ನೋಡೋದಾದ್ರೆ: ಬೀನ್ಸ್‍ಗೆ ಈ ಹಿಂದೆ ಕೆಜಿಗೆ 25 ರೂಪಾಯಿ ಇತ್ತು. ಈಗ 60 ರೂಪಾಯಿ ಆಗಿದೆ. ಇನ್ನು ಬೆಂಡೆಕಾಯಿ 28 ರೂಪಾಯಿ ಇದ್ದಿದ್ದು, ಈಗ 47ರೂಪಾಯಿ ಆಗಿದೆ. ಇನ್ನು ನುಗ್ಗೇಕಾಯಿ 30 ರೂಪಾಯಿ ಇದ್ದಿದ್ದು, 58 ರೂಪಾಯಿ ಆಗಿದೆ. ಟೊಮ್ಯಾಟೋ 10 ರೂಪಾಯಿ ಇದ್ದಿದ್ದು, 25 ರೂ ಆಗಿದೆ. ಇನ್ನು ಸೌತೆಕಾಯಿ 20 ರೂಪಾಯಿ ಇದ್ದಿದ್ದು, 35 ರೂ ಗೆ ಏರಿಕೆ ಆಗಿದೆ.
Advertisement
Advertisement
ಇನ್ನು ತರಕಾರಿ ದರ ಏರಿಕೆಯ ಮಧ್ಯೆ ಹಾಪ್ ಕಾಮ್ಸ್ ಜನರಿಗಾಗಿ ಆನ್‍ಲೈನ್ ಸೇವೆ ನೀಡಿದೆ. ತಾಜಾ ತರಕಾರಿಗಳನ್ನು ಹಾಪ್ ಕಾಮ್ಸ್ ವೆಬ್‍ಸೈಟ್‍ನಲ್ಲಿ ಅರ್ಡರ್ ಮಾಡಿದ್ರೆ, ಮನೆಬಾಗಿಲಿಗೆ ತರಕಾರಿ ಬರಲಿದೆ. ಈ ಸೇವೆ ಮುಂದಿನ ವಾರದಲ್ಲಿ ಲಭ್ಯವಾಗಲಿದೆ.