ನವದೆಹಲಿ: ಭಾರತದಲ್ಲಿ ಅತೀ ಜನಪ್ರಿಯ ಅಟೋಮೊಬೈಲ್ ಕಂಪನಿಗಳಾದ ಮಾರುತಿ, ಮಹಿಂದ್ರಾ ಕಾರುಗಳ ಬೆಲೆ ಹೆಚ್ಚಾಗಿದೆ. ಕಾರು ತಯಾರಿಕೆಯಲ್ಲಿ ಬಳಸಲಾಗುವ ಕಚ್ಛಾವಸ್ತುಗಳ ಬೆಲೆ ಏರಿಕೆಯ ಜೊತೆಗೆ ಕಾರುಗಳ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಕಂಪನಿಯು ಹೊಂದಿದೆ.
ಕಂಪನಿ ತನ್ನ ವಿವಿಧ ಮಾದರಿಗಳ ಕಾರ್‌ಗಳ ಬೆಲೆಯನ್ನು ಶೇ.0.1 ರಿಂದ ಶೇ. 4.3ರ ವರೆಗೆ ಹೆಚ್ಚಿಸಿದೆ. ಕಳೆದ ವರ್ಷ ಜನವರಿಯಲ್ಲಿ ಶೇ.1.4, ಏಪ್ರಿಲ್‌ನಲ್ಲಿ ಶೇ.1.6, ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟು ಏರಿಕೆಯಾಗಿತ್ತು. ಇದೀಗ ಮತ್ತೆ ಕಂಪನಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: ಟೆಸ್ಲಾ ಕಾರಿನ ಬಗ್ಗೆ ಅಪ್‌ಡೇಟ್ ಮಾಡಿ – ಮಸ್ಕ್ ಒತ್ತಡ ತಂತ್ರಗಳಿಗೆ ಬಗ್ಗಲ್ಲ ಎಂದ ಕೇಂದ್ರ
Advertisement
Advertisement
ಕಳೆದ ವರ್ಷ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದ್ದ ಕಾರು ಎಕ್ಸ್ಯುವಿ 700 ರ ಬೆಲೆ 12.99 ಲಕ್ಷ ರೂ. ಇದ್ದು, 13.47 ಲಕ್ಷಕ್ಕೆ ಏರಿಕೆಯಾಗಿದೆ. ಥಾರ್ ಡೀಸೆಲ್ ಕಾರುಗಳ ಬೆಲೆ 12.99 ಲಕ್ಷ ಇದ್ದು, 13.38 ಲಕ್ಷಕ್ಕೆ ಏರಿದೆ. ಸ್ಕಾರ್ಪಿಯೋ ಕಾರುಗಳ ಬೆಲೆ 41 ಸಾವಿರದಿಂದ 53 ಸಾವಿರ ರೂ. ವರೆಗೆ. ಇದನ್ನೂ ಓದಿ: ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ