ಬೆಂಗಳೂರು: ಈ ಬಾರಿ ಆದಷ್ಟು ಬೇಗ ಟಿಕೆಟ್ ಘೋಷಣೆ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರೇ (Congress Workers) ಒತ್ತಾಯಿಸುತ್ತಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ನಾಯಕರು (AICC Leaders) ಮೊದಲೇ ಟಿಕೆಟ್ ಘೋಷಣೆ ಮಾಡುವ ಭರವಸೆ ನೀಡಿದ್ದರು. ಆದರೆ ಟಿಕೆಟ್ ಘೋಷಣೆ ಕಾಂಗ್ರೆಸ್‌ನಲ್ಲೇ ಮರಿಚಿಕೆಯಾಗಿದೆ. ಒಂದು ವೇಳೆ ಆಕಾಂಕ್ಷಿಗಳ ಮಾತು ಕೇಳಿ ಟಿಕೆಟ್ ಘೋಷಣೆ ಮಾಡಿದರೆ ವಲಸಿಗರ ಪಾಡೇನು? ಬರುವವರಿಗೆ ದಾರಿ ಏನು? ಇದು ಕೈ ನಾಯಕರ ಆತಂಕ ಎನ್ನಲಾಗುತ್ತಿದೆ.
Advertisement
Advertisement
ನಿರೀಕ್ಷೆಯಿಟ್ಟ ಕ್ಷೇತ್ರಗಳಲ್ಲಿ ವಲಸಿಗರಿಗಾಗಿ ಕಾದು ನೋಡಿ ಟಿಕೆಟ್ ಘೋಷಣೆ ಮಾಡಲು ಕೈ ನಾಯಕರು ದಿನ ದೂಡುತ್ತಿದ್ದಾರೆ. ಇದ್ದವರನ್ನ ಬಿಡುವಂತಿಲ್ಲ, ಬರುವವರನ್ನೂ ಕಡೆಗಣಿಸುವಂತಿಲ್ಲ. ಹಾಗಾಗಿ ಧರ್ಮ ಸಂಕಟದಲ್ಲಿ ಕೈ ಪಾಳಯದ ನಾಯಕರು ಸಿಲುಕಿದ್ದಾರೆ. ಇದನ್ನೂ ಓದಿ: ಯುಗಾದಿ ನಂತರ ಮೆಗಾ ಆಪರೇಷನ್‌ಗೆ `ಕೈ’ ಪಾಳಯ ಸಿದ್ಧತೆ?
Advertisement
Advertisement
ಮತ್ತೊಂದೆಡೆ ಪ್ರತಿಸ್ಪರ್ಧಿಗಳ ಆತಂಕದಲ್ಲಿ ಇರುವ ಕೈ ಅಭ್ಯರ್ಥಿಗಳು ಯುಗಾದಿ ಒಳಗೆ ಟಿಕೆಟ್ ಘೋಷಣೆಗೆ ಒತ್ತಡ ಹೇರುತ್ತಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತ ಎಂದು ಹೆಸರು ಕೊಟ್ಟದ್ದೇ ಮುಸಲ್ಮಾನ ದೊರೆಗಳು ಎಂದು ಕಾಂಗ್ರೆಸ್ ಹೇಳಿದರೂ ಅಚ್ಚರಿಯಿಲ್ಲ: ಸಿ.ಟಿ.ರವಿ ವ್ಯಂಗ್ಯ