ನವದೆಹಲಿ: ಕರ್ನಾಟಕ 224 ಮತಗಳ ಪೈಕಿ ನಾಲ್ವರು ಶಾಸಕರ ಮತಗಳು ತಿರಸ್ಕೃತವಾಗಿದೆ. ಕಾಂಗ್ರೆಸ್ ಶಾಸಕರ ಎಲ್ಲಾ ಮತಗಳು ಅರ್ಹವಾಗಿವೆ.
ದ್ರೌಪದಿ ಮುರ್ಮು ಅವರಿಗೆ ಬಿಜೆಪಿ ಜೊತೆ ಜೆಡಿಸ್ ಬೆಂಬಲ ನೀಡಿದ್ದರಿಂದ ಒಟ್ಟು 154 ಮತಗಳು ಬೀಳಬೇಕಿತ್ತು. ಆದರೆ 150 ಮತಗಳು ಬಿದ್ದಿದ್ದು 4 ಮತಗಳು ತಿರಸ್ಕೃತಗೊಂಡಿದೆ. ಕಾಂಗ್ರೆಸ್‌ನ 70 ಶಾಸಕರ ಮತಗಳು ಯಶವಂತ ಸಿನ್ಹಾ ಅವರಿಗೆ ಬಿದ್ದಿದೆ.
Advertisement
Advertisement
ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳು ವಿಪ್ ಜಾರಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ, ಜೆಡಿಎಸ್ ಶಾಸಕರ ಪೈಕಿ ಯಾರು ಈ ತಪ್ಪು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ.
Advertisement
ತಾಲಿಮು ನಡೆಸಿದ್ದ ಬಿಜೆಪಿ:
ಈ ಬಾರಿ ರಾಷ್ಟ್ರಪತಿ ಮತದಾನಕ್ಕೆ ಬಿಜೆಪಿ ಭರ್ಜರಿ ತಯಾರಿ ಮಾಡಿಕೊಂಡಿತ್ತು. ಒಂದೇ ಒಂದು ಮತವೂ ಅಸಿಂಧುವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು.
Advertisement
ಈ ಮೊದಲು ಮತದಾನ ಪ್ರಕ್ರಿಯೆಯಲ್ಲಿ ಇಂದನ ಸಚಿವ ಸುನೀಲ್ ಕುಮಾರ್ ಶಾಸಕರಾದ ಸಿ ಟಿ ರವಿ, ಸತೀಶ್ ರೆಡ್ಡಿ, ಅಭಯ್ ಪಾಟೀಲ್ ತರಬೇತಿ ಪಡಿದ್ದರು. ತರಬೇತಿ ಪಡೆದ ಈ ಶಾಸಕರು ಭಾನುವಾರ ನಗರದ ಖಾಸಗಿ ಹೋಟೆಲಿನಲ್ಲಿ ಅಣಕು ಮತದಾನದ ತರಬೇತಿ ನೀಡಿದ್ದರು. ಇದನ್ನೂ ಓದಿ: ದ್ರೌಪದಿ ಮುರ್ಮುಗೆ ಗೆಲುವು – ಯಾರಿಗೆ ಎಷ್ಟು ಮತ?
ಕಳೆದ ಬಾರಿಯ ಚುನಾವಣೆಯಲ್ಲಿ 17 ಮತಗಳು ಅಸಿಂಧುಗೊಂಡಿದ್ದವು. ಈ ಸಲ ಯಾವುದೇ ಲೋಪ ಆಗದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿತ್ತು. ಈ ಸಂಬಂಧ ಎರಡು ದಿನ ಖಾಸಗಿ ಹೊಟೇಲಿನಲ್ಲಿ ಶಾಸಕರನ್ನು ಜಮಾವಣೆ ಮಾಡಿಕೊಂಡು ಬಿಜೆಪಿ ತಾಲೀಮು ನಡೆಸಿತ್ತು.