ನವದೆಹಲಿ: ದೇಶದ ಪ್ರಥಮ ಪ್ರಜೆ ಆಯ್ಕೆ ರಾಷ್ಟ್ರಪತಿ ಚುನಾವಣೆ ನಾಳೆ ನಡೆಯಲಿದೆ. ನಾಳೆ 15ನೇ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಯೋಗ ಎಲ್ಲಾ ತಯಾರಿ ನಡೆಸಿದೆ.
Advertisement
ರಾಷ್ಟ್ರಪತಿ ಚುನಾವಣೆ ಘೋಷಣೆ ಆಗುವುದಕ್ಕಿಂತ ಮೊದಲು ಎನ್‍ಡಿಎ ಮತ್ತು ವಿಪಕ್ಷಗಳ ಮಧ್ಯೆ ಬಿಗ್ ಫೈಟ್ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ ಆದಿವಾಸಿ ಮಹಿಳೆ ದ್ರೌಪದಿ ಮುರ್ಮುರನ್ನು ಎನ್‍ಡಿಎ ಅಭ್ಯರ್ಥಿ ಆದ ಮೇಲೆ ಪರಿಸ್ಥಿತಿ ಸಂಪೂರ್ಣ ಬದಲಾಗಿ ಹೋಯ್ತು. ಬಿಜೆಪಿ ಮಾತ್ರವಲ್ಲ ಪ್ರಾದೇಶಿಕ ಪಕ್ಷಗಳಲ್ಲಿ ಬಹುತೇಕ ಪಕ್ಷಗಳು ಮುರ್ಮು ಅವರಿಗೆ ಜೈ ಎಂದಿರುವ ಕಾರಣ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಕಣದಲ್ಲಿದ್ದರೂ ಚುನಾವಣೆ ಏಕಪಕ್ಷೀಯ ಆಗಲಿದೆ ಎಂಬ ಮಾತು ಕೇಳಿಬಂದಿವೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವ ಆಯ್ಕೆ
Advertisement
Advertisement
ದ್ರೌಪದಿ ಮುರ್ಮು ಜೊತೆ 44 ಪಕ್ಷಗಳಿದ್ರೆ, ಸಿನ್ಹಾ ಜೊತೆ 34 ಪಕ್ಷಗಳು ನಿಂತಿವೆ. ಎನ್‍ಡಿಎ ಕೂಟದಲ್ಲಿಲ್ಲದ ಬಿಜೆಡಿ, ವೈಎಸ್‍ಆರ್ ಕಾಂಗ್ರೆಸ್, ಶಿವಸೇನೆ, ಜೆಎಂಎಂ, ಟಿಡಿಪಿ, ಬಿಎಸ್‍ಪಿಯಂತಹ ಪಕ್ಷಗಳು ಕೂಡ ಮುರ್ಮುಗೆ ಬೆಂಬಲ ಪ್ರಕಟಿಸಿವೆ. ಇದರೊಂದಿಗೆ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆ ರಾಷ್ಟ್ರಪತಿ ಆಗುವುದು ಖಚಿತವಾಗಿದೆ. ಮುರ್ಮು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳುವುದು ಅಧಿಕೃತವಾಗಿ ತಿಳಿಸುವುದೊಂದು ಬಾಕಿ ಇದೆ. ಇದನ್ನೂ ಓದಿ: ಬುಡಕಟ್ಟು ವಿರೋಧಿ ಎಂದು ಬ್ಯಾನರ್ಜಿ ವಿರುದ್ಧ 50,000 ಪೋಸ್ಟರ್ ಹಾಕಿದ ಬಿಜೆಪಿ
Advertisement
ನಾಳೆ ಮತದಾನ ನಡೆಯಲಿದ್ದು, ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರು, ಶಾಸಕರು ಸೇರಿ ಒಟ್ಟು 4,896 ಜನಪ್ರತಿನಿಧಿಗಳು ಈ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಎಲೆಕ್ಟರೋಲ್ ಕಾಲೇಜಿನ ಒಟ್ಟು ಮೌಲ್ಯ 10,86,431 ಇದ್ದು, ಅದ್ರಲ್ಲಿ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆದವರು ವಿಜೇತರಾಗಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮುರ್ಮು ಆರೂವರೆ ಲಕ್ಷಕ್ಕೂ ಹೆಚ್ಚು ಮತ, ಯಶವಂತ ಸಿನ್ಹಾಗೆ ಮೂರೂವರೆ ಲಕ್ಷ ಮತಗಳು ಸಿಗುವ ನಿರೀಕ್ಷೆ ಇದೆ. ಜೂನ್ 21ಕ್ಕೆ ಮತ ಎಣಿಕೆ ನಡೆಯಲಿದೆ. ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರಾವಧಿ ಜುಲೈ 24ಕ್ಕೆ ಮುಗಿಯಲಿದೆ. ಜುಲೈ 25ಕ್ಕೆ ನೂತನ ರಾಷ್ಟ್ರಪತಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.