ನವದೆಹಲಿ: ದೇಶದ ಪ್ರಥಮ ಪ್ರಜೆಯಾಗಿ ಇದೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನಿರೀಕ್ಷೆಗಿಂತ ಹೆಚ್ಚು ಮತ ಪಡೆದು 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
Advertisement
ಪ್ರತಿಸ್ಪರ್ಧಿ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ನಿರೀಕ್ಷೆಯಂತೆ ಸೋಲು ಕಂಡಿದ್ದಾರೆ. ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ವಿಪಕ್ಷ ನಾಯಕರು ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ ಪೂರೈಕೆ ಭರವಸೆ ನೀಡಿದ ಕೇಜ್ರಿವಾಲ್
Advertisement
Advertisement
ಜುಲೈ 24ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರಾವಧಿ ಅಂತ್ಯಗೊಳ್ಳಲಿದ್ದು, ಜುಲೈ 25 ರಂದು ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ರೈಸಿನಾ ಹಿಲ್ ಪ್ರದೇಶದಲ್ಲಿರುವ ರಾಷ್ಟ್ರಪತಿ ಭವನವನ್ನು ಪ್ರವೇಶ ಮಾಡಲಿದ್ದಾರೆ. ಈ ಮೂಲಕ ದೇಶದ ಚರಿತ್ರೆಯಲ್ಲಿಯೇ ರಾಷ್ಟ್ರಪತಿಯಾದ ಎರಡನೇ ಮಹಿಳೆ ಎಂಬ ಗರಿಮೆಗೆ ದ್ರೌಪದಿ ಮುರ್ಮು ಅವರು ಭಾಜನರಾಗಿದ್ದಾರೆ. ಫಲಿತಾಂಶಕ್ಕೆ ಮೊದಲೇ ಮುರ್ಮು ಗೆಲುವು ಖಚಿತವಾಗಿತ್ತು. 44 ಪಕ್ಷಗಳು ಮುರ್ಮುರನ್ನು ಬೆಂಬಲಿಸಿದ್ದವು. ವಿಪಕ್ಷಗಳ ಹಲವು ಶಾಸಕರು, ಸಂಸದರು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದರು. ಗೆಲುವಿಗೆ ಶೇ.50ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ ಪೂರೈಕೆ ಭರವಸೆ ನೀಡಿದ ಕೇಜ್ರಿವಾಲ್
Advertisement
ದ್ರೌಪದಿ ಮುರ್ಮು ಪಡೆದ ಮತ:
ಮೊದಲ ಸುತ್ತು (ಸಂಸದರ ಮತಮೌಲ್ಯ 700) ಚಲಾವಣೆಯಾದ ಸಂಸದರ ಮತ – 763 – ಮತ ಮೌಲ್ಯ – 5,34,100
ದ್ರೌಪದಿ ಮುರ್ಮು – 540 – ಮತ ಮೌಲ್ಯ – 3,78,000
ಯಶವಂತ್ ಸಿನ್ಹಾ – 208 – ಮತ ಮೌಲ್ಯ – 1,45,600
ಅನರ್ಹ ಮತ – 15 – ಮತ ಮೌಲ್ಯ – 10,500
2ನೇ ಸುತ್ತು (ಶಾಸಕರ ಮತ ಮೌಲ್ಯ 130.56) ಚಲಾವಣೆಯಾದ ಶಾಸಕರ ಮತ – 1,138 – ಮತ ಮೌಲ್ಯ – 1,49,575
ದ್ರೌಪದಿ ಮುರ್ಮು – 809 – ಮತ ಮೌಲ್ಯ – 1,05,299
ಯಶವಂತ್ ಸಿನ್ಹಾ – 329 – ಮತ ಮೌಲ್ಯ – 44,276
ಅನರ್ಹ ಮತ – 00 – ಮತ ಮೌಲ್ಯ – 00