ನವದೆಹಲಿ: ಕೊರೊನಾ ಕಷ್ಟಕಾಲದಲ್ಲಿ ವೈದ್ಯರು, ನರ್ಸ್, ಮುಂಚೂಣಿ ಕಾರ್ಯಕರ್ತರು ಸೇನಾನಿಗಳ ರೀತಿ ಕೆಲಸ ಮಾಡಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಜೆಟ್ ಅಧಿವೇಶನಕ್ಕೂ ಮೊದಲು ಸೆಂಟ್ರಲ್ ಹಾಲ್‌ನಲ್ಲಿ ಸಂಸತ್ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡಿದರು. ಗಡಿಯಲ್ಲಿರುವ ಸೇನಾನಿಗಳಿಗೆ ನಮನ ಸಲ್ಲಿಸಿ ಅಜಾದ್ ಅಮೃತ್ ಮಹೋತ್ಸವ ಹಿನ್ನೆಲೆ ದೇಶದ ಜನತೆಗೆ ಅಭಿನಂದನೆ ತಿಳಿಸುತ್ತ ಭಾಷಣ ಪ್ರಾರಂಭಿಸಿದ ರಾಷ್ಟ್ರಪತಿ ಸರ್ಕಾರ ನೇತಾಜಿ ಜಯಂತಿ ಆಚರಣೆ ಮೂಲಕ ಗಣರಾಜ್ಯೋತ್ಸವ ಪ್ರಾರಂಭಿಸಿದೆ. ನಮ್ಮ ಸರ್ಕಾರ ಸಬ್ ಕಾ ವಿಕಾಸ್ ಸಬ್ ಕಾ ವಿಸ್ವಾಸ್ ರೂಪದ ಕೆಲಸ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಶಿಥಿಲಗೊಂಡ ಕಟ್ಟಡ, ಯಾವಾಗ ಬೇಕಾದರೂ ಬೀಳಬಹುದು: ದಿನೇಶ್ ಶರ್ಮಾ
Advertisement
Advertisement
ಕೊರೊನಾ ಕಷ್ಟಕಾಲದಲ್ಲಿ ವೈದ್ಯರು, ನರ್ಸ್, ಮುಂಚೂಣಿ ಕಾರ್ಯಕರ್ತರು ಸೇನಾನಿಗಳ ರೀತಿ ಕೆಲಸ ಮಾಡಿದ್ದಾರೆ. ಕೊರೊನಾ ಲಸಿಕೆ ಅಭಿಯಾನದ ಮೂಲಕ ಸಾಮರ್ಥ್ಯ ಗೊತ್ತಾಗಿದೆ. ಕೇವಲ ಒಂದು ವರ್ಷದ ಒಳಗೆ 150 ಕೋಟಿ ಡೋಸ್ ನೀಡಲಾಗಿದೆ. ಶೇ.90ಕ್ಕೂ ಹೆಚ್ಚು ಜನರಿಗೆ ಮೊದಲನೇ ಡೋಸ್ ನೀಡಲಾಗಿದೆ. 8 ವ್ಯಾಕ್ಸಿನ್‌ಗಳಿಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಭಾರತದಲ್ಲಿ ಅಭಿವೃದ್ಧಿಯಾದ ಲಸಿಕೆಗಳು ವಿಶ್ವವನ್ನೇ ಕೊರೊನಾದಿಂದ ಬಚಾವ್ ಮಾಡಲು ಸಹಕಾರಿಯಾಗಿದೆ ಎಂದು ದೇಶದ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಇದನ್ನೂ ಓದಿ: ಓಮಿಕ್ರಾನ್‍ಗಿಂತ ಓ ಮಿತ್ರೋನ್ ಹೆಚ್ಚು ಅಪಾಯಕಾರಿ: ಶಶಿ ತರೂರ್
Advertisement
LIVE: President Kovind addresses both Houses of the Parliament https://t.co/GTU2TX7r2W
— President of India (@rashtrapatibhvn) January 31, 2022
Advertisement
ಕೇಂದ್ರ ಸರ್ಕಾರ ಅನೇಕ ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ಆಯುಷ್ಮಾನ್ ಭಾರತ್ ಯೋಜನೆ ಬಡವರಿಗೆ ಸೌಲಭ್ಯ ಸಿಗುವಂತಿದೆ. ಕೊರೊನಾ ಕಾಲದಲ್ಲಿ ಭಾರತೀಯ ಫಾರ್ಮಾ ಕಂಪನಿಗಳು ತಮ್ಮ ಸಾಮರ್ಥ್ಯ ಸಾಬೀತು ಮಾಡಿವೆ. ಆಯುರ್ವೇದ, ಪಾರಂಪರಿಕ ಚಿಕಿತ್ಸೆ ಬಗ್ಗೆ ತಿಳುವಳಿಕೆ ಹೆಚ್ಚಿದೆ. ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಭಾರತದಲ್ಲಿ ಹೆಚ್ಚಿದೆ ಎಂದರು.
ಕೊರೊನಾದ ಪರಿಸ್ಥಿತಿಯಲ್ಲೂ ಬಡವರನ್ನು ಹಸಿವಿಂದ ದೂರ ಮಾಡಿದೆ. ಬಡಜನರಿಗೆ ಉಚಿತ ಪಡಿತರ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ ಇ-ಶ್ರಮ್ ಯೋಜನೆ, ಬಡವರಿಗೆ ನೇರವಾಗಿ ಹಣ ವರ್ಗಾವಣೆಯನ್ನೂ ಮಾಡಲಾಗಿದೆ. ಡಿಜಿಟಲ್ ಇಂಡಿಯಾ ಸಫಲತೆ ಪಡೆದಿದೆ. ಎಂಟು ಲಕ್ಷ ಕೋಟಿ ವಹಿವಾಟು ನಡೆದಿದೆ ಎಂದು ತಿಳಿಸಿದರು.