ನವದೆಹಲಿ: ದೇಶವು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ಮಾಡಿದ ತಮ್ಮ ಚೊಚ್ಚಲ ಭಾಷಣದಲ್ಲಿ, ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲನ್ನು ಹೇಳುವ ಮೂಲಕ ಕನ್ನಡ ಹಿರಿಮೆಯನ್ನು ಸ್ಮರಿಸಿದ್ದಾರೆ.
ದ್ರೌಪದಿ ಮುರ್ಮು ಅವರು ರಾಷ್ಟ್ರಕವಿ ಕುವೆಂಪು ಅವರ ನಾನಳಿವೆ ನಿನಳಿವೆ ಕವನದ ಸಾಲುಗಳನ್ನು ಕನ್ನಡದಲ್ಲೇ ಹೇಳುವುದರ ಜೊತೆಗೆ ಅದರ ಅರ್ಥವನ್ನು ತಿಳಿಸಿದ್ದಾರೆ. ಕನ್ನಡ ಭಾಷೆಯ ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ಕವಿ ಕುವೆಂಪು ಅವರು ಒಂದು ಕವಿತೆಯಲ್ಲಿ ನಾನು ಅಳಿವೇ, ನೀನು ಅಳುವೆ, ನಮ್ಮ ಎಲುಬುಗಳ ಮೇಲೆ ಮೂಡುವುದು- ಮೂಡುವುದು ನವ ಭಾರತ ಲೀಲೆ ಎಂದು ಹೇಳಿದ್ದಾರೆ.
Advertisement
हमारे पास जो कुछ भी है वह हमारी मातृभूमि का दिया हुआ है। इसलिए हमें अपने देश की सुरक्षा, प्रगति और समृद्धि के लिए अपना सब कुछ अर्पण कर देने का संकल्प लेना चाहिए। pic.twitter.com/Uib2axfaDz
— President of India (@rashtrapatibhvn) August 14, 2022
Advertisement
ಇದು ರಾಷ್ಟ್ರಕವಿ ಕುವೆಂಪು ಅವರು ಸ್ವಾತಂತ್ರ್ಯ ಹೋರಾಟದ ಕುರಿತು ರಚಿಸಿದ ಕವನವಾಗಿದೆ. ದೇಶಕ್ಕಾಗಿ ಕೊಡುಗೆ ನೀಡುವುದು, ದೇಶಕ್ಕಾಗಿ ಜೀವವನ್ನೇ ಮುಡುಪಾಗಿಡುವುದು ನಮ್ಮ ಆದರ್ಶವಾಗಬೇಕೆಂಬುದು ಈ ಕವಿತೆಯ ಅರ್ಥವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಬಿಂದು ಅನ್ಮೋಲ್ ಅಪಾರ್ಟ್‍ಮೆಂಟ್ ನಿವಾಸಿಗಳಿಂದ ತಿರಂಗಾ ಅನಾವರಣ
Advertisement
Advertisement
2047ರ ವೇಳೆಗೆ ದೇಶವನ್ನು ಕಟ್ಟಲು ಯುವಜನರಿಗೆ ಕರೆ ನೀಡಿದ ಅವರು, ಮಾತೃಭೂಮಿಯ ಉನ್ನತಿಗಾಗಿ ತ್ಯಾಗ ಮಾಡುವಂತೆ ಮನವಿ ಮಾಡಿದರು. ಇದೇ ವೇಳೆ ಭಾರತ ನದಿ, ಬೆಟ್ಟ, ಗುಡ್ಡ, ಬಯಲು, ಕಾಡು, ಕೃಷಿ ಸೇರಿದಂತೆ ಪ್ರಕೃತಿ ಸೌಂದರ್ಯದಿಂದ ಕೂಡಿದ ದೇಶವಾಗಿದೆ. ಈ ಸಂಪದ್ಭರಿತ ದೇಶವನ್ನು ಮುಂದಿನ ಪೀಳಿಗೆಗೆ ನೀಡುವ ಅತೀ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹೇಳಿದರು. ಇದನ್ನೂ ಓದಿ: 75ನೇ ಸ್ವಾತಂತ್ರ್ಯೋತ್ಸವ – ರಾಷ್ಟ್ರಪತಿಯಾಗಿ ದೇಶವನ್ನುದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ದ್ರೌಪದಿ ಮುರ್ಮು