ನವದೆಹಲಿ: ಬ್ರಿಟನ್ ರಾಣಿ(Queen of Britain) 2ನೇ ಎಲಿಜಬೆತ್(Elizabeth II) ಅವರ ಅಂತ್ಯಕ್ರಿಯೆಯಲ್ಲಿ(Funeral) ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಭಾಗಿಯಾಗಲಿದ್ದಾರೆ ಹಾಗೂ ಭಾರತದ ಪರವಾಗಿ ಸಂತಾಪ ಸೂಚಿಸಲಿದ್ದಾರೆ.
ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 17 ರಿಂದ 19 ರ ವರೆಗೆ ಲಂಡನ್‌ಗೆ(London) ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಕೊಡವರ ಶಸ್ತ್ರಾಸ್ತ್ರ ಹಕ್ಕು ಉಲ್ಲೇಖ, ವಿಶ್ವಾದ್ಯಂತ ಮಾನ್ಯತೆ ಇರೋ ಹಿಜಬ್‌ಗೆ ಕರ್ನಾಟಕದಲ್ಲಿ ಅನುಮತಿ ಯಾಕಿಲ್ಲ: ಸುಪ್ರೀಂನಲ್ಲಿ ವಕೀಲರ ಪ್ರಶ್ನೆ
Advertisement
Advertisement
ಬ್ರಿಟನ್ ರಾಷ್ಟ್ರದ ಮಾಜಿ ಮುಖ್ಯಸ್ಥೆ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥೆ ರಾಣಿ 2ನೇ ಎಲಿಜಬೆತ್ ಅವರು ಸೆಪ್ಟೆಂಬರ್ 8 ರಂದು ನಿಧನರಾದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಖರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಟೇಕ್ ಆಫ್ ಆಗುವ ಮೊದಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ
Advertisement
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ರಾಣಿಯ ಅಗಲಿಕೆಗೆ ದೇಶದ ವತಿಯಿಂದ ಸಂತಾಪ ಸೂಚಿಸಲು ಸೆಪ್ಟೆಂಬರ್ 12 ರಂದು ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್‌ಗೆ ಭೇಟಿ ನೀಡಿದ್ದರು. ಸೆಪ್ಟೆಂಬರ್ 11ರಂದು ಭಾರತ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಿತು.