ಪ್ರೆಸೆಂಟ್ ಪ್ರಪಂಚ 0% ಲವ್ ಪೋಸ್ಟರ್ ರಿಲೀಸ್- ಗಮನ ಸೆಳೆಯುತ್ತಿದೆ ಅಭಿರಾಮ್ 2ನೇ ಚಿತ್ರದ ಪೋಸ್ಟರ್

Public TV
1 Min Read
0 percent love

ಹಿಂದೆ ಸಂಯುಕ್ತ-2 ಸಿನಿಮಾ ನಿರ್ದೇಶಿಸಿದ್ದ ಅಭಿರಾಮ್ ಈಗ ಕಾಮಿಡಿ ಎಂಟರ್ ಟೈನ್ಮೆಂಟ್ ಸಿನಿಮಾ ಮೂಲಕ ಪ್ರೇಕ್ಷಕನ್ನು ರಂಜಿಸಲು ಸಜ್ಜಾಗಿದ್ದಾರೆ. ಪ್ರೆಸೆಂಟ್ ಪ್ರಪಂಚ 0% ಲವ್ ಎಂಬ ಕಾಮಿಡಿ ಎಂಟರ್ ಟೈನ್ಮೆಂಟ್ ಕಂ ಥ್ರಿಲ್ಲರ್ ಎಲಿಮೆಂಟ್ ಇರೋ ಸಿನಿಮಾ ನಿರ್ದೇಶನ ಮಾಡಿ ಬಿಡುಗಡೆ ಹಂತಕ್ಕೆ ಬಂದಿದ್ದಾರೆ. ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರದ ಪೋಸ್ಟರ್ ರಿಲೀಸ್ ಮಾಡೋ ಮುಖಾಂತರ ಚಿತ್ರತಂಡ ಕುತೂಹಲ ಉಂಟುಮಾಡಿದೆ.

0 love 2

ಸಂಯುಕ್ತ-2 ಚಿತ್ರಕ್ಕೆ ನಿರ್ಮಾಪಕರಾಗಿದ್ದ ಅರ್ಜುನ್ ಮಂಜುನಾಥ್ ಈ ಚಿತ್ರದಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕಾಗಿ ತೂಕ ಇಳಿಸಿಕೊಂಡು ಸಖತ್ ಯಂಗ್ ಲುಕ್ ನಲ್ಲಿ ಅರ್ಜುನ್ ಮಂಜುನಾಥ್ ಕಾಣಿಸಿಕೊಂಡಿದ್ದಾರೆ. ಸಂಭ್ರಮಶ್ರೀ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಪ್ರೆಸೆಂಟ್ ಪ್ರಪಂಚ 0% ಲವ್ ಸಿನಿಮಾ ಪ್ರಸ್ತುತ ಸಾಫ್ಟ್ ವೇರ್ ಯುಗದಲ್ಲಿ ಕಳೆದು ಹೋದ ಜನರು ತಮ್ಮ ಜೀವನದಲ್ಲಿ ಏನನ್ನು ಕಳೆದುಕೊಂಡಿದ್ದಾರೆ, ಏನಿದ್ರೆ ಜೀವನ ಚೆನ್ನಾಗಿರುತ್ತೆ ಎಂಬ ಸೂಕ್ಷ್ಮ ಎಳೆ ಇಟ್ಟುಕೊಂಡು ಈ ಚಿತ್ರ ಹೆಣೆಯಲಾಗಿದೆ. ಇದನ್ನು ಕಾಮಿಡಿ ಎಂಟಟೈನ್ಮೆಂಟ್ ಮೂಲಕ ತೆರೆ ಮೇಲೆ ತರೋ ಪ್ರಯತ್ನವನ್ನು ನಿರ್ದೇಶಕ ಅಭಿರಾಮ್ ಮಾಡಿದ್ದಾರೆ.

ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸದ್ಯಕ್ಕೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಉಂಟುಮಾಡಿರೋ ಈ ಚಿತ್ರ ಮಾರ್ಚ್ ತಿಂಗಳಲ್ಲಿ ತೆರೆಗೆ ತರೋದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

0 love

ತಬಲ ನಾಣಿ, ಚಂದನ್ ಆಚಾರ್, ಓಂ ಪ್ರಕಾಶ್ ರಾವ್,ಗೋವಿಂದೇ ಗೌಡ, ಯಶಸ್ ಅಭಿ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರಕ್ಕೆ ಕೃಷ್ಣ ಮೂರ್ತಿ ಎಲ್, ರವಿಕುಮಾರ್ ಹೆಚ್.ಪಿ ಬಂಡವಾಳ ಹೂಡಿದ್ದು, ರವಿ ತೇಜಸ್ವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *