ನಾಡಪ್ರಭು ಕೆಂಪೇಗೌಡರ ಸಿನಿಮಾಗೆ ಸಿದ್ಧತೆ: ಡಾ.ರಾಜ್ ಆಸೆಯನ್ನ ಮೊಮ್ಮಗ ಯುವ ಈಡೇರಿಸ್ತಾನಾ?

Public TV
1 Min Read
yuva rajkumar

ಸ್ಯಾಂಡಲ್ ವುಡ್ ನಲ್ಲಿ ಅಚ್ಚರಿಯ ಘಟನೆಗಳು ನಡೆಯುತ್ತಿವೆ. ಅದರಲ್ಲೂ ಸದ್ದಿಲ್ಲದೇ ನಡೆಯುವ ಕೆಲಸಗಳೇ ಸಖತ್ ಸದ್ದು ಮಾಡುತ್ತವೆ. ಈಗ ಸದ್ದು ಮಾಡುವಂತಹ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಅದು ನಿಜವಾದರೆ ತೆರೆಗೆ ಬರಲಿದ್ದಾನೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ.

nagabharn

ಹೌದು, ನಾಡಪ್ರಭು ಕೆಂಪೇಗೌಡ (Kempegowda) ಅವರ ಜೀವನದ ಕುರಿತಾಗಿ ಸಿನಿಮಾವೊಂದು ತಯಾರಾಗಲಿದ್ದು, ಅದರ ನೇತೃತ್ವವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಎಸ್ ನಾಗಾಭರಣ (TS Nagabharana) ವಹಿಸಿದ್ದಾರೆ. ಈಗಾಗಲೇ ನಾಗಾಭರಣ ಕಥೆಯನ್ನೂ ಸಿದ್ಧಪಡಿಸಿದ್ದು, ನಾಯಕನಿಗಾಗಿ ಅವರು ಕಾಯುತ್ತಿದ್ದಾರಂತೆ.

Dr. Rajkumar 2

ಅಂದುಕೊಂಡಂತೆ ಆಗಿದ್ದರೆ ನಾಡಪ್ರಭು ಕೆಂಪೇಗೌಡರ ಬಗ್ಗೆ ಬಹಳ ವರ್ಷಗಳ ಹಿಂದೆಯೇ ಸಿನಿಮಾ ಬರಬೇಕಿತ್ತು. ಕೆಂಪೇಗೌಡರ ಪಾತ್ರವನ್ನು ಮಾಡುವಂತೆ ವರನಟ ಡಾ.ರಾಜ್ ಕುಮಾರ್ ಅವರನ್ನು ಕೇಳಲಾಗಿತ್ತು. ಆ ಪಾತ್ರವನ್ನು ಮಾಡುವ ಆಸೆ ಡಾ.ರಾಜ್ ಕುಮಾರ್ ಅವರಿಗೆ ಇದ್ದರೂ, ಕೆಂಪೇಗೌಡರಿಗೆ ಅಪಚಾರವಾಗದಂತಹ ಸ್ಕ್ರಿಪ್ಟ್‌ಗಾಗಿ ಡಾ.ರಾಜ್ ಕಾದರು. ಆದರೆ, ಕೊನೆಗೂ ಅವರಿಗೆ ಅದು ಸಿಗಲಿಲ್ಲ.

yuva rajkumar 1

ಇದೀಗ ಕೆಂಪೇಗೌಡರ ಕುರಿತಾದ ಸಿನಿಮಾ ಮಾಡುವ ಅವಕಾಶ ಮತ್ತೆ ದೊಡ್ಮನೆ ಕುಟುಂಬಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಕೆಂಪೇಗೌಡ ಅವರ ಪಾತ್ರವನ್ನು ಯುವರಾಜ್ ಕುಮಾರ್ (Yuvraj Kumar) ಮಾಡಬೇಕು ಎನ್ನುವುದು ನಿರ್ದೇಶಕರ ಆಸೆ. ಯುವರಾಜ್ ಕುಮಾರ್ ಅವರನ್ನೇ ಮನಸ್ಸಲ್ಲಿಟ್ಟುಕೊಂಡು ಚಿತ್ರಕಥೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಏನಾಯಿತು ಎನ್ನುವ ವಿವರ ಲಭ್ಯವಿಲ್ಲ.

ಸದ್ಯ ಯುವ ರಾಜ್ ಕುಮಾರ್ ‘ಯುವ’ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ನಂತರ ಅವರು ಮತ್ತೊಂದು ಕಥೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕೆಂಪೇಗೌಡ ಸಿನಿಮಾ ಒಪ್ಪುತ್ತಾರಾ, ತಾತನ ಆಸೆಯನ್ನು ಯುವ ಈಡೇರಿಸುತ್ತಾರಾ ಎನ್ನುವುದು ಕುತೂಹಲದ ಪ್ರಶ್ನೆ.

Share This Article