ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ನಾವು ಹೆಚ್ಚು ರೈಸ್ ಪದಾರ್ಥಗಳನ್ನು ಮಾಡುತ್ತೇವೆ. ನೀವೂ ಕೇವಲ 10 ನಿಮಿಷದಲ್ಲಿಯೇ ಜೀರಾ ರೈಸ್ ಮಾಡಬಹುದಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ- 1ಕಪ್
* ತುಪ್ಪ- ಅರ್ಧ ಕಪ್
* ಪಲಾವ್ ಎಲೆ- 2
* ಚಕ್ಕೆ, ಲವಂಗ- ಸ್ವಲ್ಪ
* ಜೀರಿಗೆ- 4 ಚಮಚ
* ಹಸಿಮೆಣಸಿನಕಾಯಿ- 2
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿಸೊಪ್ಪು- ಸ್ವಲ್ಪ
Advertisement
ಮಾಡುವ ವಿಧಾನ:
* ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ.
* ಕುಕ್ಕರ್ಗೆ ತುಪ್ಪ ಹಾಕಿ ಬಿಸಿ ಮಾಡಿ ನಂತರ ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ, ಹಸಿಮೆಣಸಿನಕಾಯಿಯನ್ನು ಕತ್ತರಿಸಿ ಹಾಕಿ ಸ್ವಲ್ಪ ಫ್ರೈ ಮಾಡಿ ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
Advertisement
* ನಂತರ ಅಕ್ಕಿಯನ್ನು ಹಾಕಿ ಸ್ವಲ್ಪ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಇದನ್ನೂ ಓದಿ: ಬಸ್ಸಾರು ಮಾಡುವ ಸರಳ ವಿಧಾನ ನಿಮಗಾಗಿ
Advertisement
* ನಂತರ ಇದಕ್ಕೆ 2 ಕಪ್ ನೀರು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊತ್ತಂಬರಿ ಸೇರಿಸಿ ಬೇಯಿಸಿದರೆ ರುಚಿಯಾದ ಜೀರಾ ರೈಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ