ಗಾಂಧಿನಗರ: ಎಸಿ ರೂಮ್‍ನಲ್ಲಿ ಕುಳಿತು ಮಾತನಾಡುತ್ತ, ಬೇರೆಯವರಿಗೆ ತೊಂದರೆ ಕೊಡುವ ಕೌರವರ ಪಟ್ಟಿಯನ್ನು ಸಿದ್ಧಪಡಿಸುವಂತೆ ಗುಜರಾತ್‍ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕರ ವಿರುದ್ಧವೆ ಕಿಡಿಕಾರಿದ್ದಾರೆ.
ಗುಜರಾತ್‍ನಲ್ಲಿರುವ ಪಕ್ಷದ ರಾಜ್ಯ ಘಟಕವು ಇಲ್ಲಿ ಆಯೋಜಿಸಿದ್ದ ಮೂರು ದಿನಗಳ ಚಿಂತನ ಶಿಬಿರದ ‘ಚಿಂತನ-ಮಂಥನ’ ಅಧಿವೇಶನದ ಎರಡನೇ ದಿನದಂದು ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಬಿಜೆಪಿಯ ರಾಜಕಾರಣದಿಂದ ಗುಜರಾತ್ ಸಂಕಷ್ಟದಲ್ಲಿದೆ ಎಂದು ಆರೋಪಿಸಿದರು ಇದನ್ನೂ ಓದಿ: ಅಕ್ರಮದಲ್ಲಿ ಸಚಿವರು, ಶಾಸಕರ ಪಾತ್ರದ ಬಗ್ಗೆ ತನಿಖೆಯಾಗಲಿ: ಎಎಪಿ
Advertisement
Advertisement
ಮೋದಿ ವಿರುದ್ಧ ಸಿಡಿದಿದ್ದು, ಅವರ ಬಳಿ ಸಿಬಿಐ, ಇಡಿ, ಮಾಧ್ಯಮ, ಪೊಲೀಸ್, ಗೂಂಡಾಗಳು ಮತ್ತು ಪ್ರತಿದಿನ ಹೊಸ ಉಡುಗೆಗಳಿವೆ. ಆದರಿಂದ ಯಾವುದೇ ಪ್ರಯೋಜನಗಳಿಲ್ಲ. ಗುಜರಾತ್ ನಮಗೆ ಮುಖ್ಯ. ಗಾಂಧೀಜಿಯನ್ನು ನೋಡಿ, ಅವರು ಎಂದಾದರೂ ಒಳ್ಳೆಯ ಬಟ್ಟೆ, ಇಡಿ ಅಥವಾ ಸಿಬಿಐ? ಇತ್ತ. ಇಲ್ಲ ಏಕೆಂದರೆ ಸತ್ಯ ಯಾವಾಗಲೂ ಸರಳವಾಗಿದೆ ಎಂದು ಹೇಳಿದರು.
Advertisement
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತಾವು ಈಗಾಗಲೇ ಗೆದ್ದಿದ್ದೇವೆ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ನೀವು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಗುಜರಾತ್‍ನ ಜನರು ನಿಮ್ಮನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದಾರೆ. ಬಿಜೆಪಿ ಇಲ್ಲಿ ಕಾಂಗ್ರೆಸ್‍ಗೆ ಹಾನಿ ಮಾಡಿದ್ದಕ್ಕಿಂತ ಗುಜರಾತ್‍ನ ಜನರಿಗೆ ಹೆಚ್ಚು ಹಾನಿ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
Advertisement
ಎಸಿ ರೂಮ್ ನಲ್ಲಿ ಕುಳಿತು ಬೇರೆಯವರಿಗೆ ತೊಂದರೆ ನೀಡುವ ನಾಯಕರನ್ನು ಮೊದಲು ಪಟ್ಟಿ ಮಾಡಬೇಕು ಎಂದು ತನ್ನ ಪಕ್ಷದ ನಾಯಕರಿಗೆ ಸಲಹೆ ನೀಡಿದರು. ಗೊಂದಲ ಏಕೆ? ನಮ್ಮಲ್ಲಿ ಎರಡು ರೀತಿಯ ನಾಯಕರಿದ್ದಾರೆ. ಒಬ್ಬರು ಬೀದಿಗೆ ಬಂದು ಜಗಳವಾಡುತ್ತಾರೆ. ಮತ್ತೊಬ್ಬರು ತಮ್ಮ ಎಸಿ ಕಚೇರಿಗಳಲ್ಲಿ ಕುಳಿತು ಭಾಷಣ ಮಾಡುತ್ತಾರೆ. ಇತರರಿಗೆ ತೊಂದರೆ ಕೊಡುವ ಇಂತಹ ನಾಯಕರ ಪಟ್ಟಿಯನ್ನು ತಯಾರಿಸಿ ಅವರು ಕೌರವರು, ಬಿಜೆಪಿ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಚೈತ್ರಾ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿದ ಡಿಸಿ
ಸಭೆಗೆ ಬರುವುದಕ್ಕೂ ಮುನ್ನ ರಾಹುಲ್ ಅವರು ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿದರು.