ಕನ್ನಡದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಅವರ ಪುಣ್ಯ ಸ್ಮರಣೆ (Punya Smarane) ಕಾರ್ಯಕ್ರಮ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ಅಭಿಮಾನಿಗಳು ಅನ್ನದಾನ, ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ವಿಷ್ಣುವನ್ನು ಸ್ಮರಿಸಲಿದ್ದಾರೆ.
Advertisement
ಅಭಿಮಾನ ಸ್ಟುಡಿಯೋದ (Abhimana Studio) ಮಾಲೀಕರಿಗೆ ಮತ್ತು ವಿಷ್ಣು ಅಭಿಮಾನಿಗಳ ಮಧ್ಯ ವಿವಾದ ಭುಗಿಲೆದ್ದಿದೆ. ವಿಷ್ಣು ಸಮಾಧಿಯನ್ನು ತೆಗೆದು ಹಾಕುವ ಕೆಲಸಕ್ಕೆ ಬಾಲಣ್ಣ ಮಕ್ಕಳು ಮಾಡುತ್ತಿದ್ದಾರೆ ಎಂದು ವಿಷ್ಣು ಅಭಿಮಾನಿಗಳು ಆರೋಪ ಮಾಡಿದ್ದರು. ಹತ್ತು ಗುಂಟೆ ಜಮೀನು ಕೊಡುತ್ತಿಲ್ಲ ಎಂದು ಹೋರಾಟ ಮಾಡಿದ್ದರು. ಈ ಬಾರಿ ಇದಕ್ಕೆಲ್ಲ ತೆರೆ ಬೀಳಲಿದೆ ಎಂದೇ ಅಂದಾಜಿಸಲಾಗಿತ್ತು. ಇನ್ನೂ ಈ ಸಮಸ್ಯೆ ಬಗೆ ಹರಿದಂತೆ ಕಾಣುತ್ತಿಲ್ಲ.
Advertisement
Advertisement
ಹಾಗಂತ ವಿಷ್ಣು ಸಮಾಧಿಯನ್ನು ಪೂಜೆ ಮಾಡಲು ನಾಳೆ ಬಾಲಣ್ಣನ ಮಕ್ಕಳು ಅವಕಾಶ ಕೊಡುವುದಿಲ್ಲವಾ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಕುರಿತಂತೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಫೇಸ್ ಬುಕ್ ಲೈವ್ ಗೆ ಬಂದು, ಎಂದಿನಂತೆ ಪೂಜೆ ಮಾಡಬಹುದು. ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಬನ್ನಿ ಎಂದು ಕರೆ ನೀಡಿದ್ದಾರೆ. ಬೆಳಗ್ಗೆಯಿಂದಲೇ ಪೂಜಾ ಕಾರ್ಯಗಳು ನಡೆಯಲಿವೆ ಎಂದು ಹೇಳಿದ್ದಾರೆ.