ಬೆಂಗಳೂರು: ಪಂಚ ರಾಜ್ಯಗಳಲ್ಲಿ ಕೇಸರಿ ಪತಾಕೆಯನ್ನ ಹಾರಿಸಿರೋ ಬಿಜೆಪಿ 2019ರ ಚುನಾವಣೆಗೆ ಈಗಾಗಲೇ ರಣತಂತ್ರ ರೂಪಿಸ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಬ್ರಿಗೇಡ್ ಭರ್ಜರಿ ಜಯಗಳಿಸಿತ್ತು. ಮುಂದಿನ ಬಾರಿಯೂ ಅಧಿಕಾರಕ್ಕೇರಿಲು ಮೋದಿ-ಅಮಿತ್ ಷಾ ಜೋಡಿ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಅದರಂತೆ ಕಳೆದ ಬಾರಿ ಬಿಜೆಪಿ ಸೋತಿರುವ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಿದೆ. ಕಡಿಮೆ ಅಂತರದಲ್ಲಿ ಬಿಜೆಪಿ ಸೋತಿರೋ ಕ್ಷೇತ್ರಗಳಲ್ಲಿ 2019ಕ್ಕೆ ಬಿಜೆಪಿಯನ್ನ ಗೆಲ್ಲಿಸಲೇಬೇಕು ಅನ್ನೋದು ಮೋದಿ ಮಾಸ್ಟರ್ ಪ್ಲಾನ್ ಎನ್ನಲಾಗಿದೆ.
Advertisement
ಬೆಂಗಳೂರು ಗ್ರಾಮಾಂತರಕ್ಕೆ ಬರ್ತಾರೆ ಜೇಟ್ಲಿ: 2014ರಲ್ಲಿ ಬಿಜೆಪಿ ಸೋತಿರುವ ಸುಮಾರು 120 ಕ್ಷೇತ್ರಗಳಿಗೆ ಏಪ್ರಿಲ್ 6ರಿಂದ 14ರವರೆಗೆ ಕೇಂದ್ರ ಸಚಿವರು ಭೇಟಿ ನೀಡಲಿದ್ದಾರೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹೊಣೆಯನ್ನ ಹೊತ್ತಿರೋದು ಅರುಣ್ ಜೇಟ್ಲಿ. ಇಲ್ಲಿ ಸಚಿವ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವ್ರನ್ನ ಮುಂದಿನ ಬಾರಿ ಮಣಿಸಲು ಬಿಜೆಪಿ ಪ್ಲಾನ್ ಮಾಡ್ತಿದೆ.
Advertisement
ಸೋನಿಯಾ, ರಾಹುಲ್ ಕ್ಷೇತ್ರದ ಮೇಲೂ ಕಣ್ಣು: ರಾಹುಲ್ ಗಾಂಧಿಯ ಅಮೇಠಿ ಕೇತ್ರಕ್ಕೆ ಸ್ಮøತಿ ಇರಾನಿ, ಸೋನಿಯಾ ಗಾಂಧಿ ಪ್ರತಿನಿಧಿಸೋ ರಾಯ್‍ಬರೇಲಿಗೆ ವಿಕೆ ಸಿಂಗ್ ಹೋಗ್ತಿದ್ದಾರೆ. ಕೋಲ್ಕತ್ತಾಗೆ ರಾಜ್‍ನಾಥ್ ಸಿಂಗ್, ನಝೀಮಾಬಾದ್‍ಗೆ ಗಡ್ಕರಿ, ಕೇರಳದ ತ್ರಿಶೂರ್‍ಗೆ ಜೆಪಿ ನಡ್ಡಾ ಸೇರಿದಂತೆ ಸೋತ ಕ್ಷೇತ್ರಗಳಿಗೆ ಕೇಂದ್ರ ಸಚಿವರು ಭೇಟಿ ಕೊಟ್ಟು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹೈದರಾಬಾದ್ ಹೊಣೆಯನ್ನ ಅಮಿತ್ ಷಾ ಹೊತ್ತಿದ್ರೆ, ಬಿಹಾರವನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಭುಪೇಂದ್ರ ಯಾದವ್‍ಗೆ ನೀಡಲಾಗಿದೆ.
Advertisement
ಪಕ್ಷದ ಸಂಸ್ಥಾಪನಾ ದಿನವಾದ ಏಪ್ರಿಲ್ 6ರಿಂದ ಅಂಬೇಡ್ಕರ್ ಜಯಂತಿ ದಿನವಾದ ಏಪ್ರಿಲ್ 14ರವರೆಗೆ ಸೋತ ಕ್ಷೇತ್ರಗಳಲ್ಲಿ ದೀರ್ಘಾವಧಿ ಕಾರ್ಯಕ್ರಮಗಳನ್ನ ಬಿಜೆಪಿ ಆಯೋಜಿಸಿದೆ.