ಟಾಲಿವುಡ್ ನಟ ವಿಜಯ್ ದೇವರಕೊಂಡ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾದ ಮೂಲಕ ಯಶಸ್ಸು ಸಿಕ್ಕಿದೆ. ಫ್ಯಾಮಿಲಿ ಹೀರೋ ಆಗಿ ಗೆದ್ದ ಮೇಲೆ ವಿಜಯ್ ನಟನೆಯ ಮುಂದಿನ ಚಿತ್ರದ ಕೆಲಸ ಚಾಲ್ತಿಯಲ್ಲಿದೆ. VD 12 ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ (Sreeleela) ಜೊತೆ ರೊಮ್ಯಾನ್ಸ್ ಮಾಡಲು ನಿಗದಿಯಾಗಿತ್ತು. ಈಗ ಚಿತ್ರತಂಡದಿಂದ ‘ಕಿಸ್’ ನಟಿ ಔಟ್ ಆಗಿದ್ದಾರೆ. ಶ್ರೀಲೀಲಾ ಬದಲು ‘ಪ್ರೇಮಲು’ (Premalu) ಹೀರೋಯಿನ್‌ಗೆ ಮಣೆ ಹಾಕಿದ್ದಾರೆ ಚಿತ್ರತಂಡ.
‘ಗೀತಾ ಗೋವಿಂದಂ’ ಸಿನಿಮಾದ ನಂತರ ವಿಜಯ್ ದೇವರಕೊಂಡಗೆ ದೊಡ್ಡ ಮಟ್ಟದ ಯಶಸ್ಸು ಅಂತ ಸಿಕ್ಕಿಲ್ಲ. ಇದಾದ ಬಳಿಕ ಈಗ ಫ್ಯಾಮಿಲಿ ಸ್ಟಾರ್ ಚಿತ್ರ ಪ್ರೇಕ್ಷಕರಿಗೆ ಕನೆಕ್ಟ್ ಆಗಿದೆ. ವಿಜಯ್ ಮುಂದಿನ ಚಿತ್ರ ಕೂಡ ಅವರ ಕೆರಿಯರ್‌ಗೆ ದೊಡ್ಡ ಬ್ರೇಕ್ ಕೊಡಲೇಬೇಕು ಅಂತ ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿದೆ.
ಶ್ರೀಲೀಲಾ (Sreeleela) ಜೊತೆ ವಿಜಯ್ ದೇವರಕೊಂಡ (Vijay Devarakonda) ಹೊಸ ಸಿನಿಮಾ ಎಂದು ಕೆಲ ತಿಂಗಳುಗಳ ಹಿಂದೆಯೇ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಇದೀಗ ವಿಜಯ್ ಸಿನಿಮಾದಿಂದ ಶ್ರೀಲೀಲಾ ಹೊರಬಂದಿದ್ದಾರೆ ಎನ್ನಲಾಗಿದೆ. ಹಾಗಾಗಿ ಮಲಯಾಳಂ ನಟಿಗೆ ಮಣೆ ಚಿತ್ರತಂಡ ಹಾಕಿದ್ದಾರೆ. ಇದನ್ನೂ ಓದಿ:ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಲ್ಮಾನ್
ಮಾಲಿವುಡ್‌ನ ‘ಪ್ರೇಮಲು’ ಸಿನಿಮಾ ಗೆದ್ದು ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ನಾಯಕಿ ಮಮಿತಾ ಬೈಜು (Mamitha Baiju) ಚಿತ್ರದಲ್ಲಿ ಮಿಂಚಿದ್ದಾರೆ. ಸದ್ಯ ಪಡ್ಡೆಹುಡುಗರ ಕ್ರಶ್ ಕ್ವೀನ್ ಆಗಿದ್ದಾರೆ. ‘ಪ್ರೇಮಲು’ ನಾಯಕಿಯನ್ನೇ ವಿಜಯ್ ದೇವರಕೊಂಡ ಚಿತ್ರಕ್ಕೆ ಫೈನಲ್ ಮಾಡುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾದುನೋಡಬೇಕಿದೆ.