ಚಿತ್ರದುರ್ಗ: ಅಂಬುಲೆನ್ಸ್ ಇಲ್ಲದೆ ಪರದಾಡಿ ಕೊನೆಗೆ ಗರ್ಭಿಣಿಯನ್ನು ಕುಟುಂಬಸ್ಥರು ಕುರಿ ಸಾಗಿಸೋ ಟೆಂಪೋದಲ್ಲಿ 40 ಕಿ.ಮೀ ಕ್ರಮಿಸಿ ಆಸ್ಪತ್ರೆಗೆ ಕರೆತಂದ ಅಮಾನವೀಯ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಪುರ ಗ್ರಾಮದಲ್ಲಿ ನಡೆದಿದೆ.
ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣಕ್ಕೆ ಕುರಿ ಸಾಗಿಸುವ ಟೆಂಪೋದಲ್ಲಿ ಗರ್ಭಿಣಿ ಲಕ್ಷ್ಮಕ್ಕ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ನೋಡಿ ಪತಿ ಮಹಾಲಿಂಗಪ್ಪ ಅಂಬುಲೆನ್ಸ್‍ಗೆ ಕರೆ ಮಾಡಿದ್ದಾರೆ.
Advertisement
Advertisement
ಕರೆ ಮಾಡಿ ಮೂರು ಘಂಟೆಯಾದರೂ ಅಂಬುಲೆನ್ಸ್ ಬರಲೇ ಇಲ್ಲ. ಕೊನೆಗೆ ದಿಕ್ಕು ತೋಚದೆ ಲಕ್ಷ್ಮಕ್ಕನನ್ನು ವಿವಿಪುರ ಗ್ರಾಮದಿಂದ ಚಿತ್ರದುರ್ಗಕ್ಕೆ ಟೆಂಪೋದಲ್ಲಿ 40 ಕಿ.ಮೀ ಕ್ರಮಿಸಿ ಜಿಲ್ಲಾಸ್ಪತ್ರೆಗೆ ಪತಿ ಹಾಗೂ ಸಂಬಂಧಿಕರು ಕರೆತಂದಿದ್ದಾರೆ.
Advertisement
ಸರಿಯಾದ ಸಮಯಕ್ಕೆ ಟೆಂಪೋ ಸಿಕ್ಕಿದೆ. ಸಿಗದೇ ಇದ್ದಿದ್ದರೆ ಪತ್ನಿಯ ಸ್ಥಿತಿ ಏನಾಗುತ್ತಿತ್ತೋ ಎಂದು ಪತಿ ಅಳಲನ್ನು ತೋಡಿಕೊಂಡಿದ್ದಾರೆ. ಹಾಗೆಯೇ ಸಮಯ ಪ್ರಜ್ಞೆ ಇಲ್ಲದ, ಕರೆ ಮಾಡಿದರೂ ಬಾರದ ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಮಹಾಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv