– ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿ
– ಕಸದ ತೊಟ್ಟಿಯಲ್ಲಿ ಮಹಿಳೆಯ ಶವ ಪತ್ತೆ
ವಾಷಿಂಗ್ಟನ್: ಕೊಲೆಯಾದ 9 ತಿಂಗಳ ಗರ್ಭಿಣಿಯ ಹೊಟ್ಟೆಯಿಂದ ಶಿಶುವನ್ನು ಕತ್ತರಿಸಿ ಹೊರ ತೆಗೆದ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ.
ಮಾರ್ಲೆನ್ ಒಕೊವಾ ಲೋಪೆಜ್(19) ಕೊಲೆಯಾದ ಗರ್ಭಿಣಿಯಾಗಿದ್ದು, ಕ್ಲಾರಿಸಾ ಫಿಗುಯೆರಾ ಕೊಲೆ ಮಾಡಿದ ಆರೋಪಿ. ಎರಡು ವರ್ಷಗಳ ಹಿಂದೆ ಕ್ಲಾರಿಸಾ ಮಗ ಮೃತಪಟ್ಟಿದ್ದನು. ಬಳಿಕ ಆಕೆ ತನಗೆ ಮತ್ತೊಂದು ಮಗು ಪಡೆಯಬೇಕು ಎಂದುಕೊಂಡಿದ್ದಳು. ಹೀಗಾಗಿ ಮಾರ್ಲೆನ್ 9 ತಿಂಗಳ ಗರ್ಭಿಣಿಯಾಗಿದ್ದಳು.
Advertisement
ಆರೋಪಿ ಕ್ಲಾರಿಸಾ ಚಿಕ್ಕ ಮಕ್ಕಳ ಉಡುಪನ್ನು ಮಾರಾಟ ಮಾಡುತ್ತಿದ್ದಳು. ಈ ವೇಳೆ ಮಾರ್ಲೆನ್ ತನ್ನ ಮಗುವಿಗೆ ಉಡುಪು ಖರೀದಿಸಲು ಕ್ಲಾರಿಸಾಳನ್ನು ಫೇಸ್‍ಬುಕ್‍ನಲ್ಲಿ ಸಂಪರ್ಕಿಸಿದ್ದಳು. ಕ್ಲಾರಿಸಾ ಕೊಲೆಯಾದ ಮಾರ್ಲೆನ್‍ಗೆ ಉಡುಪು ನೀಡಿ ಮತ್ತಷ್ಟು ಉಡುಪು ಕೊಡುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಆಕೆ ಮಾರ್ಲೆನ್‍ಳನ್ನು ಕೊಲೆ ಮಾಡಿ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಹೊರತೆಗೆದಿದ್ದಾಳೆ.
Advertisement
Advertisement
ಕ್ಲಾರಿಸಾ ಮನೆಗೆ ಬಂದ ಮಾರ್ಲೆನ್‍ನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೆ ಆಕೆಯ ಮಗುವನ್ನು ಹೊಟ್ಟೆಯಿಂದ ಹೊರ ತೆಗೆದು ಆಕೆಯ ಶವವನ್ನು ಕಸದ ತೊಟ್ಟಿಯಲ್ಲಿ ಬಿಸಾಕಿದ್ದಳು. ಕ್ಲಾರಿಸಾ ಮಗುವನ್ನು ಹೊರತೆಗೆದ ನಂತರ ಅದು ಉಸಿರಾಡುತ್ತಿರಲಿಲ್ಲ. ಆಗ ಕ್ಲಾರಿಸಾ ಎಮರ್ಜೆನ್ಸಿ ನಂಬರ್ 911ಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಅಷ್ಟರಲ್ಲಿ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಅಲ್ಲದೆ ಸ್ಥಳಕ್ಕೆ ಬಂದ ಪೊಲೀಸರು ಯುವಕನೊಬ್ಬನ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಮಗು ಬದುಕುವುದು ಕಷ್ಟ ಎಂದು ಹೇಳಲಾಗುತ್ತಿದೆ.
Advertisement
ಈ ನಡುವೆ ಮಾರ್ಲಿನ್ ನಾಪತ್ತೆಯಾದ ವಿಷಯ ಬೆಳಕಿಗೆ ಬಂದಿದೆ. ಮಾರ್ಲಿನ್ ಮಗುವಿಗೆ ಉಡುಪು ತೆಗೆದುಕೊಳ್ಳಲು ಕ್ಲಾರಿಸಾಳನ್ನು ಫೇಸ್‍ಬುಕ್‍ನಲ್ಲಿ ಸಂಪರ್ಕಿಸಿದ್ದಳು ಎಂದು ಮಾರ್ಲಿನ್ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಕ್ಲಾರಿಸಾ ಸಾಯುತ್ತಿದ್ದ ಮಗುವಿನ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಳು. ಆಗ ಪೊಲೀಸರಿಗೆ ಕ್ಲಾರಿಸಾ ಮೇಲೆ ಅನುಮಾನ ಬಂದಿದೆ.
ಪೊಲೀಸರಿಗೆ ಅನುಮಾನ ಬಂದು ಡಿಎನ್‍ಎ ಟೆಸ್ಟ್ ಮಾಡಿಸಿದ್ದರು. ಆಗ ವರದಿಯಲ್ಲಿ ಮಗು ಮಾರ್ಲಿನ್ ಳದ್ದು ಎಂದು ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಕ್ಲಾರಿಸಾಳನ್ನು ವಿಚಾರಣೆ ನಡೆಸಲು ಆಕೆಯ ಮನೆಗೆ ಹೋದರು. ಮಗುವಿಗೆ ಜನ್ಮ ನೀಡಿದ್ದ ನಂತರ ಆಕೆಯ ತಾಯಿಯ ಕಾಲಿಗೆ ಪೆಟ್ಟು ಬಿದ್ದಿದೆ. ಮಗುವಿನ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕ್ಲಾರಿಸಾ ಮಗಳು ಪೊಲೀಸರಿಗೆ ತಿಳಿಸಿದ್ದಾಳೆ.
ಕ್ಲಾರಿಸಾ ಮಗಳ ಮಾತು ಕೇಳಿದ ಪೊಲೀಸರಿಗೆ ಅನುಮಾನ ಶುರುವಾಯಿತು. ಆಗ ಪೊಲೀಸರು ಕ್ಲಾರಿಸಾ ಮನೆಯ ಅಕ್ಕಪಕ್ಕ ಹುಡುಕಾಟ ನಡೆಸಲು ಶುರು ಮಾಡಿದ್ದರು. ಈ ವೇಳೆ ಮಾರ್ಲೆನ್ ಕಾರು ಪತ್ತೆಯಾಗಿದೆ. ಬಳಿಕ ಪೊಲೀಸರು ಸರ್ಚ್ ವಾರೆಂಟ್ ಜೊತೆ ಹಿಂತಿರುಗಿ ಕ್ಲಾರಿಸಾ ಮನೆಯಲ್ಲಿ ಸಾಕ್ಷಿಗಳನ್ನು ಹುಡುಕಿದ್ದರು. ಈ ವೇಳೆ ಮನೆಯ ಹಿಂದೆ ಇದ್ದ ಕಸದ ತೊಟ್ಟಿಯಲ್ಲಿ ಮಾರ್ಲಿನ್ ಶವ ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಾಗೋ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.