ರಾಂಚಿ: ಮದ್ಯ ಖರೀದಿಸಲು ಹಣ ಕೊಡದ ಗರ್ಭಿಣಿ ಪತ್ನಿಯನ್ನು ಪತಿ ಕತ್ತು ಹಿಸುಕಿ ಕೊಂದಿರುವ ಘಟನೆ ಜಾರ್ಖಂಡ್‍ನ ಛತ್ರಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.
ಪ್ರಿಯಾ ದೇವಿ ಮೃತಳಾಗಿದ್ದಾಳೆ. ತಿಲೇಶ್ವರ ಗಂಜು ಆರೋಪಿ ಪತಿಯಾಗಿದ್ದಾನೆ. ತಿಲೇಶ್ವರ್ ಕಳೆದ ವರ್ಷ ಮೇ 25ರಂದು ಪ್ರಿಯಾ ದೇವಿಯನ್ನು ಮದುವೆಯಾಗಿದ್ದ. ಕುಡಿತದ ಚಟಕ್ಕೆ ಬಿದ್ದ ಈತ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಪಿಜ್ಜಾ ಆರ್ಡರ್ ಮಾಡುವಾಗ 9,000 ಹೋಯ್ತು – ವಾಪಸ್ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ
ಕಂಠ ಪೂರ್ತಿ ಕುಡಿದು ಬರುತ್ತಿದ್ದ ತಲೇಶ್ವರ ಪ್ರಿಯಾ ಗರ್ಭಿಣಿ ಎನ್ನುವುದು ಲೆಕ್ಕಿಸದೇ ಹೊಡೆದು ಹಿಂಸೆ ಮಾಡುತ್ತಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಪ್ರಿಯಾ ಪ್ರಾಣವನ್ನು ತೆಗೆದಿದೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಬಿಸಿ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೂ ಕೊರೊನಾ ದೃಢ
ಒಂದು ದಿನ ತಿಲೇಶ್ವರ ಪತ್ನಿ ಬಳಿ ಮದ್ಯ ಖರೀದಿ ಮಾಡಲು ಹಣ ಕೇಳಿದ್ದಾನೆ. ಆದರೆ ಆಕೆ ಹಣ ಕೊಡಲು ನಿರಾಕರಿಸಿದ್ದಾಳೆ. ಆಗ ಮನಬಂದಂತೆ ಆಕೆಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ. ಪ್ರಿಯಾ 7 ತಿಂಗಳ ಗರ್ಭಿಣಿಯಾಗಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಿಲೇಶ್ವರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೂ ಕೊರೊನಾ ಪಾಸಿಟಿವ್