ವೆಲ್ಲಿಂಗ್ಟನ್: ಭಾರತೀಯ ವಿವಾಹಿತ ಮಹಿಳೆಯೊಬ್ಬಳ ಶವ ನ್ಯೂಜಿಲ್ಯಾಂಡ್ ನ ವೆಲ್ಲಿಂಗ್ಟನ್ ನಲ್ಲಿ ಪತ್ತೆಯಾಗಿದೆ.
ಮೃತ ಮಹಿಳೆ ಹೆಸರು ಸೋನಂ ಶೆಲಾರ್ ಎಂದು ಗುರುತಿಸಲಾಗಿದೆ. ಮೃತಳು ಮಹಾರಾಷ್ಟ್ರದ ಥಾಣೆ ನಿವಾಸಿ ಎಂದು ತಿಳಿದು ಬಂದಿದೆ. ಸಮುದ್ರ ಕಡಲ ಭಾಗದಲ್ಲಿ ಸೋನಂ ಶವ ಪತ್ತೆಯಾಗಿದ್ದು, ಆಕೆ ಹೇಗೆ ಮೃತಪಟ್ಟಿದ್ದಾರೆ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.
Advertisement
ಮೃತ ಸೋನಂ ಕಳೆದ ಡಿಸೆಂಬರ್ ನಲ್ಲಿ ನ್ಯೂಜಿಲ್ಯಾಂಡ್ ನ ಹೊಟೇಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸಾಗರ್ ಎಂಬ ಯುವಕನನ್ನು ಮದುವೆಯಾಗಿದ್ದಳು. ಸಾಗರ್ ಅನೇಕ ವರ್ಷಗಳಿಂದ ನ್ಯೂಜಿಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದನು. ಹಾಗಾಗಿ ಮದುವೆ ಬಳಿಕ ಸೋನಂ ತನ್ನ ಪತಿ ಜೊತೆ ನ್ಯೂಜಿಲ್ಯಾಂಡ್ ನಲ್ಲಿ ವಾಸಿಸುತ್ತಿದ್ದಳು.
Advertisement
ನವೆಂಬರ್ 17ರಂದು ಸೋನಂ ಅಪಾರ್ಟ್ ಮೆಂಟ್ ನಲ್ಲಿ ಕಾಣೆಯಾಗುತ್ತಾರೆ. ಬಳಿಕ ಆತಂಕಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸೋಮವಾರ ವೈರಪ ಬೀಚ್ ನಲ್ಲಿ ಸೋನಂ ಶವ ಪತ್ತೆಯಾಗಿದೆ.
Advertisement
ಸದ್ಯಕ್ಕೆ ಸೋನಂ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಇದು ಕೊಲೆನೋ ಅಥವಾ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆಯೇ ಎಂದು ತನಿಖೆ ಮಾಡುತ್ತಿದ್ದಾರೆ. ಮೃತ ಸೋನಂ 5 ತಿಂಗಳ ಗರ್ಭಿಣಿ ಎಂದು ಕುಟುಂಸಬಸ್ಥರು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv