ಹೈದರಾಬಾದ್: ಅತ್ಯಾಚಾರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ವ್ಯಾನ್‍ನಿಂದ ಜಿಗಿದ ಪರಿಣಾಮ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಶನಿವಾರ ರಾತ್ರಿ ಮೇದಕ್ ಜಿಲ್ಲೆಯ ತೂಪ್ರನ್ ಬಳಿಯ ರವೆಲ್ಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ಘಟನೆ ನಡೆದಿದೆ. ಆದ್ರೆ ಭಾನುವರದಂದು ಈ ಘಟನೆ ಬೆಳಕಿಗೆ ಬಂದಿದೆ. ಮೃತ ಗರ್ಭಿಣಿಯನ್ನು ತೂಪ್ರನ್ ಮಂಡಲ್‍ನ ಪೋತುರಜುಪಲ್ಲಿ ನಿವಾಸಿಯಾದ ಕಲಾವತಿ(35) ಎಂದು ಗುರುತಿಸಲಾಗಿದೆ. ಇವರು 7 ತಿಂಗಳ ಗರ್ಭಿಣಿಯಾಗಿದ್ದರು.
ಕಲಾವತಿ ಅವರು ಕೆಲಸ ಮುಗಿಸಿ ಮನೆಗೆ ಹೋಗಲು 7 ವರ್ಷದ ಮಗಳು ಶ್ರೀಶಾಳೊಂದಿಗೆ ಕೊಂಡಪಲ್ಲಿ ಗ್ರಾಮದಿಂದ ವ್ಯಾನ್‍ವೊಂದನ್ನ ಹತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಕಲಾವತಿ ಅವರ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾರೆ. ಸಹಾಯಕ್ಕಾಗಿ ಕಲಾವತಿ ಜೋರಾಗಿ ಕಿರುಚಿಕೊಂಡರೂ ಚಾಲಕ ಆಕೆಯ ಗ್ರಾಮದ ಬಳಿ ಬಸ್ ನಿಲ್ಲಿಸಿಲ್ಲ. ಹೀಗಾಗಿ ಅವರಿಂದ ತಪ್ಪಿಸಿಕೊಳ್ಳಲು ಕಲಾವತಿ ವ್ಯಾನ್‍ನಿಂದ ಹೊರಗೆ ಜಿಗಿದಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಚಲಿಸುತ್ತಿದ್ದ ವ್ಯನ್‍ನಿಂದ ಹೊರಗೆ ಹಾರಿದ ಕಾರಣ ಕಲವತಿ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಗಳು ಕಲಾವತಿ ಅವರ ಮಗಳು ಶ್ರಿಶಾಳನ್ನು ಕೂಡ ಕೆಲವು ಮೀಟರ್ ದೂರದಲ್ಲಿ ಎಸೆದುಹೋಗಿದ್ದಾರೆ. ಸ್ಥಳೀಯರ ನೆರವಿನಿಂದ ಶ್ರೀಶಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ.
ರಾಷ್ಟ್ರೀಯ ಹೆದ್ದಾರಿ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸಿರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.