ಲಕ್ನೋ: ಗರ್ಭಿಣಿ ಮಹಿಳೆ ಮೇಲೆ ಮೂವರು ಕಿಡಿಗೇಡಿಗಳು ಮೂರು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ಮುಂಜಾನೆ ಆರೋಪಿಗಳು ನಿದ್ರೆಗೆ ಜಾರಿದ ನಂತರ ಅವರಿಂದ ತಪ್ಪಿಸಿಕೊಂಡ ಎರಡು ತಿಂಗಳ ಗರ್ಭಿಣಿ ಮಹಿಳೆ ಬಹದ್ದೂರ್‌ಪುರ ಗ್ರಾಮಕ್ಕೆ 12 ಕಿಲೋಮೀಟರ್ ನಡೆದುಕೊಂಡು ಹೋಗಿ ಗ್ರಾಮಸ್ಥರ ಬಳಿ ಘಟನೆಯನ್ನು ವಿವರಿಸಿದ್ದಾಳೆ. ನಂತರ ಗ್ರಾಮಸ್ಥರು ಫರೂಕಾಬಾದ್‍ನ ರಾಜೇಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದೀಗ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಫರೂಕಾಬಾದ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಕಾಂಗ್ರೆಸ್ ಕಾರ್ಯಕರ್ತ – ಮೊಟ್ಟೆ ಎಸೆದಿದ್ದಕ್ಕೆ ಸಂಪತ್ ಕೊಟ್ಟ ಸ್ಪಷ್ಟನೆ ಏನು..?
Advertisement
Advertisement
30 ವರ್ಷದ ಮಹಿಳೆ ಉತ್ತರ ಪ್ರದೇಶದ ಬರೇಲಿಯವರಾಗಿದ್ದು, ಸಹರಾನ್‍ಪುರಕ್ಕೆ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆಗಸ್ಟ್ 16 ರಂದು ಬರೇಲಿಯಿಂದ ಸಹರಾನ್‍ಪುರಕ್ಕೆ ಬಸ್‍ನಲ್ಲಿ ಹೋಗುತ್ತಿದ್ದ ಮಹಿಳೆ, ಫರೂಕಾಬಾದ್ ಬಸ್ ಟರ್ಮಿನಲ್‍ನಲ್ಲಿ ಇಳಿದು, ಅಲ್ಲಿಂದ ಸಹರಾನ್‍ಪುರಕ್ಕೆ ಮತ್ತೊಂದು ಬಸ್‍ನಲ್ಲಿ ಹೋಗಬೇಕಾಗಿತ್ತು. ಹೀಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಆಕೆಯ ಬಳಿಗೆ ಬಂದ ಮೂವರು ದುಷ್ಕರ್ಮಿಗಳು ಮುಖಕ್ಕೆ ಏನನ್ನೋ ಹಾಕಿದ್ದಾರೆ. ಇದರಿಂದ ಮಹಿಳೆ ಪ್ರಜ್ಞೆ ತಪ್ಪಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ನಂತರ ಪ್ರಜ್ಞೆ ಬಂದಾಗ ಹುಲ್ಲಿನ ರಾಶಿ ಸಂಗ್ರಹಿಸಿದ್ದ ಕೋಣೆಯಲ್ಲಿರುವುದು ಗೊತ್ತಾಗಿದೆ. ಅಲ್ಲದೇ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು ಮತ್ತು ನಾಲ್ವರು ವ್ಯಕ್ತಿಗಳು ತನ್ನ ಪಕ್ಕದಲ್ಲಿ ಕುಳಿತಿದ್ದರು. ಬಳಿಕ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ಜೀವ ಬೆದರಿಕೆಯೊಡ್ಡಿದರು. ಅಲ್ಲದೇ ಮೂರು ದಿನಗಳ ಕಾಲ ನನಗೆ ತಿನ್ನಲು ಏನನ್ನೂ ನೀಡಲಿಲ್ಲ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಲೇಜು ಬಸ್ ಹಾಗೂ ಗೂಡ್ಸ್ ಲಾರಿ ಡಿಕ್ಕಿ- ಇಬ್ಬರು ಚಾಲಕರ ಸಾವು, 39 ವಿದ್ಯಾರ್ಥಿನಿಯರಿಗೆ ಗಾಯ
ಶುಕ್ರವಾರ ಮುಂಜಾನೆ ನಾಲ್ವರು ಮಲಗಿದ್ದ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಒಂದು ಹಳ್ಳಿಗೆ ಬಂದು, ಗ್ರಾಮಸ್ಥರ ಬಳಿ ತಾನು ಅನುಭವಿಸಿದ ಕಷ್ಟವನ್ನು ಹೇಳಿಕೊಂಡಿದ್ದಾಳೆ ಎಂದು ರಾಜೇಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ದಿನೇಶ್ ಗೌತಮ್ ತಿಳಿಸಿದ್ದಾರೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.