Bengaluru CityCinemaKarnatakaLatestMain PostSandalwood

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಬಿಪಾಶಾ ಬಸು ದಂಪತಿ

ಬಾಲಿವುಡ್‌ನ (Bollywood) ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಬಿಪಾಶಾ ಬಸು (Bipasha Basu) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಬರಲಿರುವ ಹೊಸ ಅತಿಥಿಯ ಆಗಮನದ ಕಾತುರದಲ್ಲಿದ್ದಾರೆ ಬಿಪಾಶಾ ದಂಪತಿ. ಇದೀಗ ಸದ್ಯ ಚೆಕಪ್‌ಗಾಗಿ ಮುಂಬೈ ಆಸ್ಪತ್ರೆಗೆ ಬಂದಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಹಿಂದಿಯ ಸಾಕಷ್ಟು ಚಿತ್ರಗಳಲ್ಲಿ ಮಿಂಚಿರುವ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಸದ್ಯದಲ್ಲೇ ಪೋಷಕರಾಗಲಿದ್ದಾರೆ. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ತುಂಬು ಗರ್ಭಿಣಿಯಾಗಿರುವ ಬಿಪಾಶಾ ಜನರಲ್ ಚೆಕಪ್‌ಗಾಗಿ ಮುಂಬೈನ ಹಿಂದುಜಾ ಆಸ್ಪತ್ರೆಗೆ(Hinduja Hospital) ಭೇಟಿ ನೀಡಿದ್ದಾರೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟಿಯರನ್ನ ಸೆಡ್ಡು ಹೊಡೆದು ಸ್ಟಾರ್ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

 

View this post on Instagram

 

A post shared by Bipasha Basu (@bipashabasu)

ಇತ್ತೀಚೆಗಷ್ಟೇ ಬಿಪಾಶಾ ಬಸು ಅವರ ಬೇಬಿ ಶವರ್ ಕಾರ್ಯಕ್ರಮ ಮತ್ತು ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಮೊದಲ ಮಗುವಿನ ನಿರೀಕ್ಷೆಯ ಜೊತೆ ಖುಷಿಯಲ್ಲಿದ್ದಾರೆ ಬಿಪಾಶಾ ದಂಪತಿ.

Live Tv

Leave a Reply

Your email address will not be published. Required fields are marked *

Back to top button