ಬೆಂಗಳೂರು: ಪಾದರಾಯನಪುರ ನಿವಾಸಿ 34 ವರ್ಷದ ಕೊರೊನಾ ಸೋಂಕಿತ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಹುಟ್ಟಿದ ಮಗುವನ್ನು ವೈದ್ಯರು ತಾಯಿಯಿಂದ ಬೇರೆ ಮಾಡಿದ್ದಾರೆ. ಇದೀಗ ಒಂದು ದಿನದ ಮಗುವಿಗೂ ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಮಗುವಿನ ಗಂಟಲು ದ್ರವ ತೆಗೆದುಕೊಂಡು ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.
Advertisement
Advertisement
ಮಗುವನ್ನ ಐಸೂಲೇಷನ್ ವಾರ್ಡಿನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡಿನಲ್ಲಿ ಇರಿಸಲಾಗಿದೆ. ಈ ಮೂಲಕ ಕೊರೊನಾ ಮಹಾ ಮಾರಿಯಿಂದ ತಾಯಿ, ಮಗು ದೂರ ದೂರವಾಗಿದ್ದಾರೆ. ತಂದೆ-ತಾಯಿ ಅಪ್ಪುಗೆಯಲ್ಲಿ ಇರಬೇಕಾದ ಮಗು ಈಗ ಐಸೂಲೇಷನ್ ವಾರ್ಡಿನಲ್ಲಿದೆ.
Advertisement
ಮಗುವಿಗೆ ಚಿಕಿತ್ಸೆ ಹೇಗೆ?
ಮೊದಲಿಗೆ ಮಗುವಿನ ಗಂಟಲು ದ್ರವವನ್ನು ತೆಗೆದುಕೊಂಡು ವೈದ್ಯರು ಪರೀಕ್ಷೆ ಮಾಡಿದ್ದಾರೆ. ಗಂಟಲು ದ್ರವ ಪರೀಕ್ಷೆ ಬಳಿಕ ಎರಡನೇ ಹಂತವಾಗಿ ಕಂದಮ್ಮನ ರಕ್ತವನ್ನು ತೆಗೆದುಕೊಂಡು ಪರೀಕ್ಷೆಗೆ ಕಳಿಸಲಿದ್ದಾರೆ. ಅಲ್ಲದೇ ಉಸಿರಾಟದ ಸಮಸ್ಯೆ ಇದಿಯಾ ಎಂದು ಪರೀಕ್ಷೆ ಮಾಡುತ್ತಾರೆ. ನಂತರ ನ್ಯೂಮೋನಿಯಾ ಚೆಕ್ ಮಾಡಲಿದ್ದಾರೆ. ಒಂದು ದಿನದ ಕಂದಮ್ಮನಿಗೆ ಯಾವ ಸಮಸ್ಯೆ ಪತ್ತೆಯಾಗುತ್ತೋ ಆ ಸಮಸ್ಯೆಗೆ ವೈದ್ಯರು ಚಿಕಿತ್ಸೆ ನೀಡುತ್ತಾರೆ.
Advertisement
ಅಮ್ಮನ ಅಪ್ಪುಗೆಯಲ್ಲಿ ಇರಬೇಕಾದ ಒಂದು ದಿನದ ಮಗುವಿಗೆ ಹೈ ಟ್ರೀಟ್‍ಮೆಂಟ್ ನೀಡಲಾಗುತ್ತದೆ. ಈ ಸಮಯದಲ್ಲಿ ತಾಯಿ ಎದೆ ಹಾಲಿನಿಂದ ಕೊರೊನಾ ಹರಡಲ್ಲ. ಬದಲಾಗಿ ತಾಯಿ ಹತ್ತಿರದಿಂದ ಮಗುವಿಗೆ ಹಾಲು ಕೊಡುವುದರಿಂದ ಉಸಿರಾಟದ ಮೂಲಕ ಕೊರೊನಾ ಹರಡುತ್ತೆ. ಹೀಗಾಗಿ ತಾಯಿ ಮಗುವನ್ನ ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗುವಿಗೆ ಹಾಲಿನ ಪೌಡರ್ ನೀಡಲಾಗುತ್ತಿದ್ದು, ಮಗು ಹುಟ್ಟಿದಾಗಲೇ 3 ಕೆ.ಜಿ ಇದೆ ಎಂದು ವೈದ್ಯರು ತಿಳಿಸಿದ್ದಾರೆ.