ಹಾಸನ: ಹಾಸನಾಂಬೆ ದೇಗುಲಕ್ಕೆ ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ(Anitha Kumaraswamy) ಅವರನ್ನು ಶಾಸಕ ಪ್ರೀತಂಗೌಡ (Preetham Gowda) ಕೈಮುಗಿದು ಕುಶಲೋಪರಿಯನ್ನು ವಿಚಾರಿಸಿದರು.
ಶಾಸಕಿ ಅನಿತಾಕುಮಾರಸ್ವಾಮಿ ಹಾಸನಾಂಬೆ ದೇವಿ ದರ್ಶನಕ್ಕೆ ಆಗಮಿಸಿದರು. ಈ ವೇಳೆ ಗರ್ಭಗುಡಿಯ ಹೊರಭಾಗದಲ್ಲಿ ಕುಳಿತಿದ್ದ ಶಾಸಕ ಪ್ರೀತಂಗೌಡ ಅವರು, ಅನಿತಾ ಕುಮಾರಸ್ವಾಮಿ ಬರುತ್ತಿದ್ದಂತೆ ಕೈಮುಗಿದು, ಅಕ್ಕ ಚೆನ್ನಾಗಿದ್ದೀರಾ ಎಂದು ಮಾತನಾಡಿಸಿ ಗರ್ಭಗುಡಿಗೆ ಹೋಗಿ ಅಕ್ಕ ಎಂದು ಕಳುಹಿಸಿದರು. ಶಾಸಕಿ ಅನಿತಾ ಕುಮಾರಸ್ವಾಮಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇವಾಲಯ (Hasanamba Temple) ದರ್ಶನಕ್ಕೆ ಎರಡು ದಿನ ಮಾತ್ರ ಭಕ್ತರಿಗೆ ಅವಕಾಶವಿದ್ದು, ಇಂದು ಸಹಸ್ರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ ನಾಲ್ಕನೇ ಭಾರೀ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದರು. ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಅವರ ಕುಟುಂಬದವರ ಜೊತೆ ದೇವಾಯಲಕ್ಕೆ ಆಗಮಿಸಿ ನಾಲ್ಕನೇ ಭಾರಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ದೇವೇಗೌಡರು, ಚೆನ್ನಮ್ಮ, ರೇವಣ್ಣ, ಭವಾನಿ, ಸೂರಜ್, ಪ್ರಜ್ವಲ್, ಕುಮಾರಸ್ವಾಮಿ, ಅನಿತಾ, ನಿಖಿಲ್ ಸೇರಿದಂತೆ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಈ ವಿಧಾನದಲ್ಲಿ ಪೂಜೆ ಮಾಡಿ ಎಂದು ಗರ್ಭಗುಡಿಯಲ್ಲಿ ಅರ್ಚಕರಿಗೆ ಹೇಳಿದರು. ನಂತರ ಸರತಿ ಸಾಲಿನಲ್ಲಿ ಬಂದು ಸಿದ್ದೇಶ್ವರ ಸ್ವಾಮಿ ದೇವರ ದರ್ಶನ ಪಡೆದರು. ಇದನ್ನೂ ಓದಿ: ಉಕ್ರೇನ್ ಬಿಟ್ಟು ಬನ್ನಿ – ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿದ ರಾಯಭಾರ ಕಚೇರಿ