– ಹೊಳೆನರಸೀಪುರ ಕೇಸಲ್ಲಿ ಅರೆಸ್ಟ್ ವಾರೆಂಟ್‌ಗೆ ಅನುಮತಿ
ಬೆಂಗಳೂರು: ಪೆನ್‌ಡ್ರೈವ್ ಕೇಸಲ್ಲಿ (Pendrive Case) ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಅತಿದೊಡ್ಡ ಶಾಕ್ ಎದುರಾಗಿದೆ. ಹೊಳೆನರಸೀಪುರ (Holenarasipura) ಕೇಸಲ್ಲಿ ಪಾಸ್‌ಪೋರ್ಟ್ (Passport) ರದ್ದು ಮಾಡಲು ಕೋರ್ಟ್ ಅನುಮತಿ ನೀಡಿದೆ. ಅಲ್ಲದೆ, ಅರೆಸ್ಟ್ ವಾರೆಂಟ್‌ಗೆ (Arrrest Warrant) ಎಸ್‌ಐಟಿ (SIT) ಪರ್ಮಿಷನ್ ಪಡೆದಿದೆ.
ಎಸ್‌ಐಟಿಗೂ ಸಿಗದೇ ತಲೆಮರೆಸಿಕೊಂಡಿರುವ ಪ್ರಜ್ವಲ್ ವಿದೇಶದಲ್ಲೇ ವಾಸ್ತವ್ಯ ಹೂಡಿದ್ದಾರೆ. ಭೂಗತವಾಗೇ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹಾಗಾಗಿ ಏನೇ ಆಗಲಿ ಪ್ರಜ್ವಲ್‌ನನ್ನು ಬಂಧಿಸಲೇಬೇಕು ಎಂದು ಎಸ್‌ಐಟಿ ಪಣ ತೊಟ್ಟಿದೆ. ಅದರಂತೆ 42ನೇ ಎಸಿಎಂಎಂ ಕೋರ್ಟ್, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿದ್ದ ನೋಟಿಸ್‌ಗಳ ಬಗ್ಗೆ ಕೋರ್ಟ್ ಮಾಹಿತಿ ಕೇಳಿತ್ತು. ಈ ವೇಳೆ ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ನೀಡಿರುವ ಬಗ್ಗೆ ಎಸ್‌ಐಟಿ ಮಾಹಿತಿ ನೀಡಿದೆ. ಇದೀಗ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಇದನ್ನೂ ಓದಿ: ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವು
- Advertisement
- Advertisement
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗಲು ಈಗಾಗಲೇ ಎಸ್‌ಐಟಿ ಲುಕ್‌ಔಟ್ ನೋಟಿಸ್ ಹಾಗೂ ಬ್ಲೂ ಕಾರ್ನರ್ ನೋಟಿಸ್ ನೀಡಿತ್ತು. ಇದೀಗ ಅರೆಸ್ಟ್ ವಾರೆಂಟ್ ಲಭಿಸಿರುವುದರಿಂದ ಸಿಬಿಐ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. ರೆಡ್ ಕಾರ್ನರ್ ನೋಟಿಸ್ ಬಳಿಕ ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಆಗಲಿದ್ದು, ಇದರಿಂದ ಬಂಧನಕ್ಕೆ ಸಹಕಾರಿಯಾಗಲಿದೆ. ಇದನ್ನೂ ಓದಿ: RCB vs CSK ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ – ಸಿಎಂಗೆ ಸಚಿವರ ಸಾಥ್
ಇನ್ನು ದೋಷಾರೋಪ ಪಟ್ಟಿ ಸಲ್ಲಿಕೆಗೆ ಮುಂದಾದ ಎಸ್‌ಐಟಿ, ಈಗ ಮತ್ತೊಂದು ಪ್ರಬಲ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಪ್ರಜ್ವಲ್ ರೇವಣ್ಣ ಅಕೌಂಟ್‌ಗಳನ್ನೇ ಈಗ ಫ್ರೀಜ್ ಮಾಡಲು ಹೊರಟಿದೆ. ಬೆಂಗಳೂರಿನಿಂದಲೇ ಪ್ರಜ್ವಲ್ ಅಕೌಂಟ್‌ಗೆ ಲಕ್ಷಾಂತರ ರೂ. ಹಣ ಸಂದಾಯವಾಗಿದೆ. ಹೀಗಾಗಿ ವಿದೇಶದಲ್ಲಿ ಇರೋ ಪ್ರಜ್ವಲ್‌ನನ್ನು ಆರ್ಥಿಕವಾಗಿ ಕಟ್ಟಿಹಾಕಲು ಅಕೌಂಟ್ ಫ್ರೀಜ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಎಸ್‌ಐಟಿ ಮೂಲಗಳ ಮಾಹಿತಿಯ ಪ್ರಕಾರ ಪ್ರಜ್ವಲ್ 7 ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿದ್ದು, ಆ ಬ್ಯಾಂಕ್‌ಗಳ ಸಂಪೂರ್ಣ ಮಾಹಿತಿಯನ್ನು ಎಸ್‌ಐಟಿ ಪಡೆದುಕೊಂಡಿದೆ. ಇದನ್ನೂ ಓದಿ: ನಿಮ್ಮ ಸೇವೆಗೆ ದೇವರು ನನ್ನ ಕಳುಹಿಸಿದ್ದಾನೆ: ಮೋದಿ
ಒಟ್ಟಿನಲ್ಲಿ ವಿದೇಶದಲ್ಲಿ ಭೂಗತರಾಗಿರುವ ಪ್ರಜ್ವಲ್ ರೇವಣ್ಣಗೆ ಅಸಲಿ ಬಿಗ್ ಶಾಕ್ ಈಗ ಕಾದಿದೆ. ಯಾವ ಕಾರ್ನರ್ ನೋಟಿಸ್‌ಗೂ ಜಗ್ಗದ ಪ್ರಜ್ವಲ್‌ಗೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿ, ಪಾಸ್‌ಪೋರ್ಟ್ ರದ್ದುಪಡಿಸಿ, ಅರೆಸ್ಟ್ ವಾರೆಂಟ್ ಮೂಲಕ ಪ್ರಜ್ವಲ್ ಬಂಧನಕ್ಕೆ ಎಸ್‌ಐಟಿ ಬಲೆ ಬೀಸಿದೆ. ಇದನ್ನೂ ಓದಿ: ಬರ ಪರಿಹಾರ ಹಣ ಬಿಡುಗಡೆ – ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ