– ನಿಷೇಧವಿದ್ದರೂ ಕ್ರಸ್ಟ್ ಗೇಟ್ ಮೇಲ್ಭಾಗದಲ್ಲಿಯೇ ಫೋಟೋಶೂಟ್ ಮಾಡಿಸಿಕೊಂಡ ಜೋಡಿ
– ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ; ತನಿಖೆಗೆ ಆಗ್ರಹ
ಕೊಪ್ಪಳ: ನಿಷೇಧವಿದ್ದರೂ ತುಂಗಭದ್ರಾ ಡ್ಯಾಂ (Tungabhadra Dam) ಬಳಿ ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ (Pre-Wedding Photoshoot) ಮಾಡಿಸಿಕೊಂಡಿದ್ದು, ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಹೊಸಪೇಟೆ (Hosapete) ಮೂಲದ ಜೋಡಿ ಫೋಟೋಶೂಟ್ ಮಾಡಿಸಿಕೊಂಡವರು ಎಂದು ತಿಳಿದುಬಂದಿದೆ. ಬುಧವಾರ (ಸೆ.4) ಬೆಳ್ಳಂಬೆಳಗ್ಗೆ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಪ್ರೀ ವೆಡ್ಡಿಂಗ್ ಶೂಟ್ ಫೋಟೋಸ್ ವೈರಲ್ ಆಗಿವೆ.ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ
Advertisement
Advertisement
ಕೆಎ-01 ಎಂ ವೈ 2174 ನಂಬರ್ ಹೊಂದಿರುವ ಕಾರಿನಲ್ಲಿ ಕೂತು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ರಿಪೇರಿಗೊಂಡ ಕ್ರಸ್ಟ್ ಗೇಟ್ ಆಪರೇಟರ್ ಸಿಸ್ಟಮ್ ಪಕ್ಕದಲ್ಲಿಯೇ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ.
Advertisement
ಟಿಬಿ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕಿತ್ತುಹೋದ ಪ್ರಕರಣ ಬಳಿಕ ಡ್ಯಾಂ ಮೇಲೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಸಾರ್ವಜನಿಕರು ಸೇರಿದಂತೆ ಮಾಧ್ಯಮದವರಿಗೂ ಪ್ರವೇಶವನ್ನು ನಿಷೇಧಿಸಲಾಗಿದೆ. ನಿಷೇಧವಿದ್ದರೂ ಜೋಡಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನೆ ವ್ಯಕ್ತವಾಗಿದೆ.ಇದನ್ನೂ ಓದಿ: ಗಣೇಶ ಮತ್ತೆ ಬಂದ.. ಪರಿಸರ ಸ್ನೇಹಿ ಮೂರ್ತಿಯ ಪ್ರಯೋಜನ ನಿಮಗೆಷ್ಟು ಗೊತ್ತು?
ವೈರಲ್ ಆದ ಫೋಟೋಸ್‌ನಲ್ಲಿ ಜೋಡಿ ಇದ್ದ ಕಾರಿನ ಹಿಂದೆ ಇನ್ನೊಂದು ಕಾರು ನಿಂತಿರುವುದು ಕಾಣಿಸಿದೆ. ಫೋಟೋಶೂಟ್‌ಗೆ ಅಧಿಕಾರಿಗಳು ಸಾಥ್ ನೀಡಿದ್ದಾರಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ನಿಷೇಧಿತ ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ನಡೆದಿರುವ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.