ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅನ್ನದೊಂದಿಗೆ ಸಿಗಡಿ ಸುಕ್ಕ ಇದ್ರೆ ಎಷ್ಟು ಚಂದ ಅಲ್ವಾ. ರುಚಿಯಾದ ಸಿಗಡಿ ಸುಕ್ಕ ನೀವೂ ಒಮ್ಮೆ ಟ್ರೈ ಮಾಡಿ. ನಿಮ್ಮ ಮನೆ ಮಂದಿ ಇಷ್ಟ ಪಟ್ಟು ಸವಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಬೇಕಾಗುವ ಸಾಮಗ್ರಿಗಳು:
* ಸಿಗಡಿ- ಅರ್ಧ ಕೆಜಿ
* ಹಸಿಮೆಣಸು- 2
* ಈರುಳ್ಳಿ-1
* ಟೊಮೆಟೊ – 1
* ತೆಂಗಿನತುರಿ – 1 ಕಪ್
* ಅಡುಗೆ ಎಣ್ಣೆ- ಅರ್ಧ ಕಪ್
* ಅರಿಸಿನಪುಡಿ- ಅರ್ಧ ಚಮಚ
* ಹುಣಸೆಹಣ್ಣು- ಸ್ವಲ್ಪ
* ನಿಂಬೆಹಣ್ಣಿನ-1
* ಕರಿಬೇವು- ಸ್ವಲ್ಪ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ದನಿಯಾ ಪೌಡರ್- ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಕರಿಬೇವು, ತೆಂಗಿನತುರಿ ಸೇರಿಸಿ ಹುರಿದಿಟ್ಟಕೊಳ್ಳಿ. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ
Advertisement
* ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಕರಿಬೇವು, ಈರುಳ್ಳಿ ಹಾಕಿ ಅದನ್ನೂ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ತೊಳೆದು ಸ್ವಚ್ಛ ಮಾಡಿದ ಸಿಗಡಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ ಪುಡಿ, ಹಸಿಮೆಣಸು ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ ಪಾತ್ರೆಯನ್ನು ಮುಚ್ಚಿ ಬೇಯಿಸಿ. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ
Advertisement
* ದನಿಯಾ, ಹುಣಸೆರಸ ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಸುಕ್ಕ ಸ್ವಲ್ಪ ಗಟ್ಟಿಯಾದಾಗ ಅದಕ್ಕೆ ಹುರಿದುಕೊಂಡ ತೆಂಗಿನತುರಿ ಸೇರಿಸಿ ಮಿಶ್ರಣ ಮಾಡಿದರೆ ರುಚಿಯಾದ ಸಿಗಡಿ ಸುಕ್ಕಾ ಸವಿಯಲು ಸಿದ್ಧವಾಗುತ್ತದೆ.