ಬೆಂಗಳೂರು: ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಮಸೀದಿ, ಮಂದಿರಗಳಿಗೆ, ಚರ್ಚ್, ಪಬ್, ಕ್ಲಬ್‍ಗಳಿಗೆ ನೋಟಿಸ್ ಕೊಡಲಾಗಿದೆ. ನೋಟಿಸ್ ನೀಡಿಯೂ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪೊಲೀಸ್ ಮಹಾನಿರ್ದೇಕ ಪ್ರವೀಣ್ ಸೂದ್ ನೀಡಿದ್ದಾರೆ.
Advertisement
ದೇವಸ್ಥಾನ ಮಂದಿರ ಮಸೀದಿಗಳಲ್ಲಿ ಚರ್ಚ್, ಪಬ್, ಕ್ಲಬ್ ಸ್ಟಾಂಡರ್ಡ್ ಸೌಂಡ್ ಬಳಕೆ ಮಾಡಬೇಕು ಹೈಕೋರ್ಟ್ ಆದೇಶದಲ್ಲಿ ಸೂಚಿಸಿರುವ 55 ಡಿಸೆಬಲ್ ಶಬ್ಧವನ್ನು ಮಾತ್ರ ಬಳಸಬೇಕು. ನಿಯಮ ಮೀರಿ ಶಬ್ಧದ ಬಳಕೆ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರಿಗಿಸುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೂ ಬುಲ್ಡೋಜರ್ ಕಾನೂನು ಬರಲಿ: ಸಚಿವ ಆರ್. ಅಶೋಕ್
Advertisement
Advertisement
ಸೌಂಡ್ ಸ್ಪೀಕರ್ ಬಗ್ಗೆ ಎಲ್ಲಾ ಸಮುದಾಯವರ ಸಭೆ ಮಾಡಿ ಮನವರಿಕೆ ಮಾಡಲಾಗಿದೆ. ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾದ ಮುಖಂಡರೆಲ್ಲರು ಕೂಡ ಕಾನೂನು ಪಾಲನೆ ಮಾಡುವ ಭರವಸೆ ನೀಡಿದ್ದು ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಮನವರಿಕೆ ನಡುವೆಯೂ ಕಾನೂನು ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಜರಗಿಸಲಾಗುತ್ತೆ ಎಂದರು. ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆ – ಹೋರಿ ತಿವಿದು ಯುವಕ ಸಾವು
Advertisement