Dakshina KannadaDistrictsKarnatakaLatestLeading NewsMain Post
ಮನೆಯ ಸದಸ್ಯರ ಜೊತೆ ಸಂಘದ ಪ್ರಾರ್ಥನೆ ಮಾಡುತ್ತಿದ್ದ ಪ್ರವೀಣ್

Advertisements
ಮಂಗಳೂರು: ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.
ಮನೆಯ ಸದಸ್ಯರ ಜೊತೆ ಸಂಘದ ಪ್ರಾರ್ಥನೆ ಮಾಡುತ್ತಿದ್ದ ಪ್ರವೀಣ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದ ಪ್ರವೀಣ್ ನೆಟ್ಟಾರು ಸಾಮಾಜಿಕ ಜಾಲತಾಣದಲ್ಲಿ ಅವರ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದರು. ಇದನ್ನೂ ಓದಿ: ನನ್ನ ಮುಂದಿನ ಜೀವನ ಏನು ಎಂದು ಗೊತ್ತಿಲ್ಲ: ಪ್ರವೀಣ್ ಪತ್ನಿ ನೂತನ ಕಣ್ಣೀರು
ಫೇಸ್‌ಬುಕ್ ಖಾತೆಯ ಪ್ರೊಫೈಲ್ ವಿವರದಲ್ಲಿ ಏಕಾತ್ಮತಾ ಸ್ತೋತ್ರದ “ರತ್ನಾಕರಾಧೌತಪದಾಂ ಹಿಮಾಲಯ ಕಿರೀಟಿನೀಂ ಬ್ರಹ್ಮರಾಜರ್ಷಿ ರತ್ನಾಢ್ಯಾಂ ವಂದೇ ಭಾರತಮಾತರಂ” ಸಾಲನ್ನು ಬರೆದಿದ್ದರು.