ಮಂಗಳೂರು: ಪ್ರವೀಣ್ ಕುಮಾರ್ ನೆಟ್ಟಾರು (Praveen Kumar Nettar) ಹತ್ಯೆ ಪ್ರಕರಣದ ಆರೋಪಿಗಳ ಬೆನ್ನು ಬಿದ್ದಿರುವ (National Investigation Agency) ಎನ್‍ಐಎಗೆ ಮಹತ್ವದ ಸುಳಿವು ಸಿಕ್ಕಿದೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿ ಎನ್‍ಐಎ ವಿದೇಶದತ್ತ ತೆರಳಲು ತಯಾರಿ ನಡೆಸಿದೆ.
Advertisement
2022ರ ಜುಲೈ 27 ರಂದು ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ (Bellare) ಬಿಜೆಪಿ (BJP) ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಿಎಫ್‍ಐ ಸಂಘಟನೆ ನಡೆಸಿದ ಈ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಹತ್ಯೆ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಿದ ಬಳಿಕ ತೀವ್ರಗತಿಯಲ್ಲಿ ತನಿಖೆ ನಡೆದಿದ್ದು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಹತ್ತು ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಆದ್ರೆ ಹತ್ಯೆಯ ಮಾಸ್ಟರ್ ಪ್ಲಾನ್ ಮಾಡಿದವರು, ಹಣಕಾಸು ಹಾಗೂ ಆಶ್ರಯ ನೀಡಿದ ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನ ತಲೆನೋವಾಗಿದ್ದ ಎನ್‍ಐಎ ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿತ್ತು. ಒಟ್ಟು ಆರು ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ಒಟ್ಟು 22 ಲಕ್ಷ ಬಹುಮಾನ ಘೋಷಿಸಿತ್ತು. ಇದರ ಫಲವಾಗಿಯೇ ಇದೀಗ ಇಬ್ಬರು ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿದ್ದು ಬಂಧನಕ್ಕೆ ಎನ್‍ಐಎ ಬಲೆ ಬೀಸಿದೆ. ಇದನ್ನೂ ಓದಿ: Praveen Nettaru murder case: 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ NIA
Advertisement
Advertisement
ಮೊದಲಿಗೆ ನಾಲ್ಕು ಆರೋಪಿಗಳ ಬಂಧನಕ್ಕೆ ಎನ್‍ಐಎ ಬಹುಮಾನ ಘೋಷಿಸಿದ್ದು ಬಳಿಕ ಜನವರಿ 22 ರಂದು ಬಂಟ್ವಾಳದ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್ ಹಾಗೂ ನೆಕ್ಕಿಲಾಡಿ ಅಗ್ನಾಡಿ ಹೌಸ್ ನಿವಾಸಿ ಕೆ.ಎ.ಮಸೂದ್ ಪತ್ತೆಗೆ ಒಟ್ಟು ಹತ್ತು ಲಕ್ಷ ಬಹುಮಾನ ಘೋಷಿಸಿತ್ತು. ಈ ಬಹುಮಾನ ಘೋಷಣೆಯ ಕೆಲವೇ ದಿನಗಳಲ್ಲಿ ಎನ್‍ಐಎ ಅಧಿಕಾರಿಗಳಿಗೆ ಅನಾಮಿಕ ವ್ಯಕ್ತಿ ಮಾಹಿತಿ ನೀಡಿದ್ದು ಆರೋಪಿಗಳಿಬ್ಬರೂ ಸೌದಿ ಅರೇಬಿಯಾದಲ್ಲಿ ಇರುವ ಸುಳಿವು ನೀಡಿದ್ದಾನೆ. ಹೀಗಾಗಿ ಎನ್‍ಐಎ ಅಧಿಕಾರಿಗಳು ಈ ಇಬ್ಬರನ್ನೂ ಸೌದಿ ಅರೇಬಿಯಾದಿಂದ ಬಂಧಿಸಿ ತರಲು ತಯಾರಿ ನಡೆಸಿದ್ದಾರೆ. ಇವರ ಬಂಧನಕ್ಕೆ ಬೇಕಾದ ಸಹಾಯಕ್ಕೆ ಸೌದಿ ಅರೇಬಿಯಾ ಸರ್ಕಾರದ ಜೊತೆ ಉನ್ನತ ಅಧಿಕಾರಿಗಳು ಈಗಾಗಲೇ ಮಾತುಕತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಬಂಧಿಸಿ ಕರೆ ತರುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತೀರ್ಮಾನ ಮಾಡಿದ್ದೇನೆ: ಬಿಎಸ್‌ವೈ
Advertisement
ಈ ಹತ್ಯೆ ಪ್ರಕರಣದಲ್ಲಿ ಇನ್ನೂ ನಾಲ್ವರು ಪ್ರಮುಖ ಆರೋಪಿಗಳಿದ್ದು ಅವರ ಬಂಧನಕ್ಕೆ ಮೊದಲ ಹಂತದಲ್ಲಿ 12 ಲಕ್ಷ ರೂ. ಬಹುಮಾನ ಘೋಷಿಸಿದೆ. ಆರೋಪಿಗಳಾದ ಸುಳ್ಯದ ಬೆಳ್ಳಾರೆ ಬೂಡುಮನೆ ನಿವಾಸಿ ಮೊಹಮ್ಮದ್ ಮುಸ್ತಾಫಗೆ 5 ಲಕ್ಷ ರೂ., ಮಡಿಕೇರಿಯ ಗದ್ದಿಗೆ ನಿವಾಸಿ ತುಫೈಲ್ ಎಚ್.ಎಂಗೆ 5 ಲಕ್ಷ ರೂ., ಸುಳ್ಯದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಫಾರೂಕ್‍ಗೆ 2 ಲಕ್ಷ ರೂ. ಹಾಗೂ ಸುಳ್ಯದ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಪತ್ತೆಗೆ 2 ಲಕ್ಷ ರೂ. ಬಹುಮಾನ ಈ ಹಿಂದೆಯೇ ಎನ್‍ಐಎ ಘೋಷಿಸಿತ್ತು. ಒಟ್ಟಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಎನ್ಐಎ ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೂ ವಿರಮಿಸುವ ಲಕ್ಷಣ ಕಾಣಿಸುತ್ತಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k