ಮಡಿಕೇರಿ: ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಯ ಆರೋಪಿಗಳಿಗಾಗಿ ಎನ್‍ಐಎ (NIA) ತಂಡ ಬಹಳಷ್ಟು ಹುಡುಕಾಟ ನಡೆಸುತ್ತಿದೆ. ಆದ್ರೆ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಸುಳಿವು ಮಾತ್ರ ಇನ್ನೂ ಸಿಕ್ತಾ ಇಲ್ಲ. ಬಹಳಷ್ಟು ಕಡೆಗಳಲ್ಲಿ ತಲಾಶ್ ನಡೆಸಿದ ಎನ್‍ಐಎ ತಂಡ ಇದೀಗ ನಾಲ್ವರು ಪ್ರಮುಖ ಆರೋಪಿಗಳ ವಾಂಟೆಡ್ ಲಿಸ್ಟ್ ರಿಲೀಸ್ ಮಾಡಿದ್ದು, ಅದರಲ್ಲಿ ಕೊಡಗು (Kodagu) ಮೂಲದ ತುಫೈಲ್ ಕೂಡ ಒಬ್ಬ. ಹೀಗಾಗಿ ತುಫೈಲ್‍ಗಾಗಿ ಎನ್‍ಐಎ ಮಡಿಕೇರಿಯಲ್ಲೂ (Madikeri) ಹುಡುಕಾಟ ಆರಂಭಿಸಿದೆ.
ತುಫೈಲ್ (Tufail) ಮೂಲತಃ ಕೊಡಗು ಜಿಲ್ಲೆ ಮಡಿಕೇರಿಯ ಗದ್ದಿಗೆಯ ನಿವಾಸಿಯಾಗಿದ್ದಾನೆ. ಪ್ರವೀಣ್ ನೆಟ್ಟಾರು ಹತ್ಯೆಯ ಸಮಯದಲ್ಲಿ ಈತ ಆರೋಪಿಗಳಿಗೆ ಸಹಕಾರವನ್ನು ನೀಡಿದ್ದ ಎಂಬ ಆರೋಪದ ಅಡಿಯಲ್ಲಿ ಈತನನ್ನೂ ಕೂಡ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಸುಳ್ಯದ ಬೆಳ್ಳಾರೆಯಲ್ಲಿ ಹತ್ಯೆ ನಡೆಸಿ ಪರಾರಿಯಾದ ಆರೋಪಿಗಳಿಗೆ ಈತ ಉಳಿದುಕೊಳ್ಳಲು ವಸತಿ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಅದಲ್ಲದೆ ಈತ ನಿಷೇಧಿತ PFI ಸಂಘಟನೆಯಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ. ಈ ಹಿಂದೆ ತುಫೈಲ್‍ನನ್ನು ಹುಡುಕಿಕೊಂಡು ಎನ್‍ಐಎ ತಂಡ ಸೆಪ್ಟೆಂಬರ್‌ನಲ್ಲಿ ಎರಡು ಭಾರಿ ಕೊಡಗಿಗೆ ಬಂದಿತ್ತು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್ – ನಾಲ್ವರು ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ಬಹುಮಾನ ಘೋಷಣೆ
ಸೆಪ್ಟೆಂಬರ್ 6 ಮತ್ತು 22 ರಂದು ಕೊಡಗಿಗೆ ಭೇಟಿ ಕೊಟ್ಟ ತಂಡ ತುಫೈಲ್ ಮನೆ ಸೇರಿದಂತೆ ಮಡಿಕೇರಿಯ ಸಾಕಷ್ಟು ಸ್ಥಳಗಲ್ಲಿ ಹುಡುಕಾಟ ನಡೆಸಿತ್ತು. ಆದ್ರೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಕೂಡ ಲಭ್ಯವಾಗಿರಲಿಲ್ಲ. ಕಳೆದ ಹಲವು ದಿನಗಳಿಂದ ಆರೋಪಿಗಳು ಪತ್ತೆಯಾಗದ ಹಿನ್ನಲೆಯಲ್ಲಿ ಇದೀಗ ಎನ್‍ಐಎ ತಂಡ ನಾಲ್ಕು ಜನರ ವಾಂಟೆಡ್ ಲಿಸ್ಟ್ ರಿಲೀಸ್ ಮಾಡಿದ್ದು ಅದರಲ್ಲಿ ಕೊಡಗಿನ ತುಫೈಲ್ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಿದೆ. ಮಡಿಕೇರಿ ನಗರ ಪೊಲೀಸರ ಸಹಾಯದಿಂದ ಆತನ ಮನೆ ಸೇರಿದಂತೆ ಸುಮಾರು 40 ಕಡೆಗಳಲ್ಲಿ ವಾಂಟೆಡ್ ಪೋಸ್ಟರ್ ಅಂಟಿಸಲಾಗಿದ್ದು, ಯಾರಾದರು ಈತನ ಸುಳಿವು ಸಿಕ್ಕಿದ್ದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ. ಇದನ್ನೂ ಓದಿ: ಹಾಡಹಗಲೇ ಮಹಿಳೆ ಮೇಲೆ ಯುವಕರಿಂದ ಅತ್ಯಾಚಾರಕ್ಕೆ ಯತ್ನ
ಮಡಿಕೇರಿಯ ಗದ್ದಿಗೆ ಬಳಿ ತುಫೈಲ್ ನಿವಾಸ ಇದೆ. ಆದರೆ ಆತ ಮನೆ ಬಿಟ್ಟು 8 ತಿಂಗಳಾಗಿದೆ ಎನ್ನುತ್ತಿರುವ ಪೋಷಕರು ಅವನಿಗೂ ನಮಗೂ ಜಗಳವಾಗಿ ಬೇರೆ ಇದ್ದೇವು 8 ತಿಂಗಳಿಂದ ಆತ ನಮ್ಮ ಸಂಪರ್ಕದಲ್ಲಿಲ್ಲ ಅಂತ ಪೋಷಕರು ಹೇಳ್ತಾರೆ. ಈತ ಪ್ರವಿಣ್ ನೆಟ್ಟಾರು ಹತ್ಯೆಯ ಸಮಯದಲ್ಲಿ ಕೊಡಗಿನಲ್ಲೇ ಇದ್ದ ನಂತರದಲ್ಲಿ ಆತ ಪರಾರಿಯಾಗಿದ್ದು ಎಂಬ ಆರೋಪ ಕೂಡ ಹರಿದಾಡುತ್ತಿದೆ. ಹೀಗಾಗಿ ತುಫೈಲ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.