ಮಂಗಳೂರು: ಮನೆ ಕಟ್ಟಬೇಕು ಅಂತ ಸಮತಟ್ಟು ಮಾಡಿದ ಜಾಗದಲ್ಲಿಯೇ ನನ್ನ ಮಗ ಪ್ರವೀಣ್ ನನ್ನು ಸುಡಲಾಗಿದೆ ಎಂದು ಹೇಳುತ್ತಾ ಪ್ರವೀಣ್ ಕುಮಾರ್ ನೆಟ್ಟಾರು ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಗ ಇಲ್ಲದ ಮುಂದಿನ ದಾರಿ ಏನು ಎಂಬುದು ಗೊತ್ತಿಲ್ಲ. ಎಲ್ಲಿ ಹೋಗಿ ಬಂದರೂ ಪೊಪ್ಪ.. ಅಮ್ಮಾ ಅಂತಾ ಬಾಯ್ತುಂಬಾ ಕರೀತಾ ಇದ್ದ. ಪ್ರವೀಣ್ ನನ್ನ ಮುದ್ದು ಮಗ. ಮೂವರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಈತನೇ ಕೊನೆಯವನು. ಕಷ್ಟ-ಸುಖದಲ್ಲಿ ಭಾಗಿಯಾಗುವವನು ಎಂದು ಕಣ್ಣೀರಾಕಿದರು. ಇದನ್ನೂ ಓದಿ: ನನ್ನ ಮುಂದಿನ ಜೀವನ ಏನು ಎಂದು ಗೊತ್ತಿಲ್ಲ: ಪ್ರವೀಣ್ ಪತ್ನಿ ನೂತನ ಕಣ್ಣೀರು
ನಮಗಿಬ್ಬರಿಗೂ ಕೆಲಸ ಮಾಡಲು ಆಗುತ್ತಿಲ್ಲ. ಅವನ ಅಪ್ಪ ಹಾರ್ಟ್ ಪೇಷೆಂಟ್, 2-3 ಬಾರಿ ಆಪರೇಷನ್ ಕೂಡ ಆಗಿದೆ. ನಾನು ಕೂಡ ಶುಗರ್ ಪೇಷೆಂಟ್ ಆಗಿದ್ದು, ನನಗೂ ಕೆಲಸ ಮಾಡಲು ಆಗ್ತಿಲ್ಲ. ಹಾಗಂತ ಅವನೂ ಯಾವತ್ತೂ ನಮಗೆ ತಿನ್ನೋಕೆ ಕಡಿಮೆ ಮಾಡಿಲ್ಲ. ಪೊಪ್ಪ-ಅಮ್ಮಾ ಅಂತ ಕರೀತಿದ್ದ ನನ್ನ ಮಗುವನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ಗದ್ಗದಿತರಾದರು.
ನನ್ನ ಮಗನನ್ನು ಯಾರು ಕೊಂದರೋ ಅವರಿಗೆ ಶಿಕ್ಷೆಯಾಗಲಿ. ಆ ಪಾಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ನಮ್ಮ ಬದುಕು ಹೋಯ್ತು.. ಅವರನ್ನು ಉಳಿಸಬೇಕಾ..? ಸರ್ಕಾರ ನಮಗೆ ನ್ಯಾಯ ಒದಗಿಸಿಕೊಡಲಿ ಎಂದು ಪ್ರವೀಣ್ ತಾಯಿ ಆಗ್ರಹಿಸಿದರು. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- ಬಂಧಿತ ಕೆಲಸ ಮಾಡುತ್ತಿದ್ದ ಅಂಗಡಿಗೆ ಮುತ್ತಿಗೆ
ನಮಗೆ ಕುಡಿಯಲು ನೀರಿಲ್ಲ. ಬೋರ್ ತೆಗೆಯುವ ಕೆಲಸ ಅರ್ಧಕ್ಕೆ ಬಾಕಿ ಆಯ್ತು. ಮನೆ ಕಟ್ಟಬೇಕು ಅಮ್ಮ ಅಂತ ಹೊರಟ ಅದೂ ಅರ್ಧದಲ್ಲಿಯೇ ಇದೆ. ಮನೆ ಕಟ್ಟಬೇಕು ಅಂತ ಸಮತಟ್ಟು ಮಾಡಿದ ಜಾದಲ್ಲಿಯೇ ನನ್ನ ಮಗನನ್ನು ಸುಡಲಾಗಿದೆ. ನಮಗೆ ಮನೆ ಇಲ್ಲ, ಕುಡಿಯೋಕೆ ನೀರಿಲ್ಲ ಮುಂದೆ ಯಾವ ರೀತಿ ಜೀವನ ಮಾಡುವುದು ಎಂದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮಗೆ ತುಂಬಾ ಸಾಲ ಇದೆ. ಇದನ್ನೆಲ್ಲ ಯಾರು ಇನ್ನು ತೀರಿಸುತ್ತಾರೆ. ನಮಗೆ ದುಡಿಯಲು ಆಗ್ತಿಲ್ಲ. ಮನೆಯಲ್ಲಿ ಸಮಸ್ಯೆಗಳಿದ್ದರೂ ಆತ ಸಮಾಜ ಸೇವೆಯಲ್ಲಿಯೇ ತೊಡಗಿಸಿಕೊಳ್ಳುತ್ತಿದ್ದ ಎಮದು ಮಗನ ನೆನಪಿಸಿಕೊಂಡು ತಾಯಿ ಅತ್ತು ಬಿಟ್ಟರು. ಇದನ್ನೂ ಓದಿ: ಪ್ರವೀಣ್ ಹಂತಕರನ್ನು ಕೇರಳ ಗಡಿಯವರೆಗೆ ಕಳುಹಿಸಿ ಕೊಟ್ಟಿದ್ದೇವೆ: ಬಂಧಿತ ಆರೋಪಿಗಳು