– ಕಿಲ್ಲಿಂಗ್ ಸ್ಕ್ವಾಡ್‍ಗೆ ತರಬೇತಿ
ಬೆಂಗಳೂರು/ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು (Praveen Kumar Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್‍ಐಎ ಚಾರ್ಜ್‍ಶೀಟ್ (NIA Chargesheet) ನಲ್ಲಿ ಮತ್ತಷ್ಟು ಸ್ಫೋಟಕ ರಹಸ್ಯಗಳು ಬಯಲಾಗಿವೆ.
Advertisement
ಮುಸ್ಲಿಂ ಆಡಳಿತ ಜಾರಿಗಾಗಿ ಭಯೋತ್ಪಾದನಾ ಕೃತ್ಯಕ್ಕೆ ಪಿಎಫ್‍ಐ ಸ್ಕೆಚ್ ಹಾಕಿದ್ದು, ಪಿಎಫ್‍ಐ ಸಭೆಯಲ್ಲಿ ಕಿಲ್ಲಿಂಗ್ ಸ್ವಾಡ್ ರಚನೆ ಬಗ್ಗೆ ಚರ್ಚೆ ನಡೆದಿದೆ. ಕಿಲ್ಲಿಂಗ್ ಸ್ಕ್ವಾಡ್‍ಗೆ ಶಸ್ತ್ರಾಸ್ತ್ರ ನೀಡಿ ಪಿಎಫ್‍ಐ ತರಬೇತಿ ನೀಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: Praveen Nettaru murder case: 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ NIA
Advertisement
6 ದಿನ; 10 ಮೀಟಿಂಗ್; 7 ಜನರ ಶಾರ್ಟ್ ಲಿಸ್ಟ್: 2047ಕ್ಕೆ ಮುಸ್ಲಿಂ ಆಡಳಿತ ಜಾರಿಗೆ ತರುವ ಉದ್ದೇಶವನ್ನು ಪಿಎಫ್‍ಐ (Popular Front Of India) ಹೊಂದಿತ್ತು. ಇದಕ್ಕಾಗಿ ಸಮಾಜದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನ ನಡೆಸುತ್ತಿತ್ತು. ಪಿಎಫ್‍ಐನ ಪ್ರಮುಖ ನಾಯಕರು ಸಭೆ ನಡೆಸಿ ಯಾರನ್ನ ಕೊಲೆ ಮಾಡಬೇಕು ಎಂದು ನಿರ್ಧಾರ ಮಾಡುತ್ತಿದ್ದರು. ಇದಕ್ಕಾಗಿ ಕಿಲ್ಲಿಂಗ್ ಸ್ಕ್ವಾಡ್ಸ್ ನ್ನ ಮಾಡಿಕೊಂಡು ಕಾರ್ಯಾಚರಣೆ ಮಾಡುತ್ತಿತ್ತು. ಅದರಂತೆ ಆರೋಪಿಗಳು ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ಬೆಂಗಳೂರು, ಸುಳ್ಯ ಹಾಗೂ ಬೆಳ್ಳಾರೆಯಲ್ಲಿ ಸಭೆಗಳನ್ನ ಮಾಡಿದ್ದರು. ಇನ್ನೂ ಆರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಎನ್‍ಐಎ ಹುಡುಕಾಟ ನಡೆಸಿತ್ತು.
Advertisement
Advertisement
ಪಿಎಫ್‍ಐನ ಇಸ್ಲಾಮಿಕ್ ಆಡಳಿತವನ್ನ ಜಾರಿಗೆ ತರಲು ಅಡ್ಡಿಯಾಗುವ ವ್ಯಕ್ತಿಗಳನ್ನ ಶತ್ರುಗಳು ಎಂದು ಗುರುತಿಸಲಾಗುತ್ತಿತ್ತು. ಇಂತಹವರನ್ನ ಕೊಲೆ ಮಾಡುವ ಕೆಲಸವನ್ನ ಈ ಸರ್ವಿಸ್ ಟೀಮ್ ಅಥವಾ ಕಿಲ್ಲಿಂಗ್ ಸ್ಕ್ವಾಡ್ ಮಾಡುತ್ತಿತ್ತು. ಈ ಕಿಲ್ಲಿಂಗ್ ಸ್ಕ್ವಾಡ್‍ಗೆ ಶಸ್ತ್ರಾಸ್ತ್ರ ನೀಡಿ ತರಬೇತಿ ನೀಡಲಾಗುತ್ತಿತ್ತು. ಕೊಲೆ ಹೇಗೆ ಮಾಡಬೇಕು ಪುನಃ ಹೇಗೆ ತಪ್ಪಿಸಿಕೊಳ್ಳಬೇಕು ಎಲ್ಲದರ ಬಗ್ಗೆಯೂ ತರಬೇತಿ ನೀಡಲಾಗುತ್ತಿತ್ತು. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನ ಗುರುತಿಸಿ ಕೊಲೆ ಮಾಡಿದ ಬಳಿಕ ಅಷ್ಟೇ ಸುಲಭವಾಗಿ ಎಸ್ಕೇಪ್ ಆಗುವ ತರಬೇತಿಯನ್ನ ಕಿಲ್ಲಿಂಗ್ ಸ್ಕ್ವಾಡ್ ಪಡೆದುಕೊಂಡಿತ್ತು.
ಒಟ್ಟಿನಲ್ಲಿ 7 ಹಿಂದೂಗಳಲ್ಲಿ ಇಬ್ಬರ ಹತ್ಯೆಗೆ ಪ್ಲಾನ್ ಮಾಡಲಾಗಿತ್ತು. ಪ್ರವೀಣ್ ಹತ್ಯೆ ಬಳಿಕ ಆರೋಪಿಗಳು ಮಡಿಕೇರಿಯಲ್ಲಿ ತುಫೈನ್ ಮನೆಯಲ್ಲಿ ಅಡಗಿದ್ದರು.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k