ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪೊಲೀಸರಿಗೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಹತ್ಯೆಗೆ ಏನು ಕಾರಣ? ಪ್ರಕರಣದ ಆರೋಪಿಗಳು ಯಾರು? ಎಂದು ಕಂಡುಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ನಡುವೆ ಕೊಲೆಗೆ ಹಲಾಲ್, ಜಟ್ಕಾ ವ್ಯಾಪಾರ ಒಂದು ಕಾರಣ ಎಂಬ ಅನುಮಾನ ಎದ್ದಿದೆ.
Advertisement
ಹಿಜಬ್ ಹೋರಾಟದಿಂದ ಆರಂಭವಾಗಿ ಮುಂದುವರಿದು ಹಲಾಲ್, ಜಟ್ಕಾನೇ ಹತ್ಯೆಗೆ ಕಾರಣವಾಯಿತಾ ಎಂಬ ಗುಮಾನಿ ಈಗ ಪೊಲೀಸರಿಗೆ ಕಾಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಬ್ ಹೋರಾಟ ನಂತರ ರಾಜ್ಯಕ್ಕೆ ಕಿಚ್ಚು ಹಚ್ಚಿತ್ತು. ಹಲಾಲ್, ಜಟ್ಕಾ, ವ್ಯಾಪಾರ ಬಹಿಷ್ಕಾರ ಹೀಗೆ ಒಂದರ ಮೇಲೆ ಒಂದು ವಿವಾದಗಳು ಆರಂಭವಾಗಿತ್ತು. ನೆಟ್ಟಾರು ಪೇಟೆಯಲ್ಲಿ ಚಿಕನ್ ಸ್ಟಾಲ್ ನಡೆಸುತ್ತಿದ್ದ ಪ್ರವೀಣ್ ಹಲಾಲ್, ಜಟ್ಕಾ ವಿಚಾರದಲ್ಲಿ ಕೊಲೆಯಾದರೇ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಇದನ್ನೂ ಓದಿ: ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ
Advertisement
Advertisement
ಜಟ್ಕಾ ಜಟಾಪಟಿ ನಂತರ ಪ್ರವೀಣ್‍ಗೆ ಒಳ್ಳೆಯ ವ್ಯಾಪಾರ ಆಗುತ್ತಿತ್ತು. ಇದು ಮುಸ್ಲಿಂ ಚಿಕನ್ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಕೊಲೆಯಾಯ್ತು ಎಂಬ ಪ್ರಶ್ನೆಯನ್ನು ಹಿಡಿದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ಸಿಸಿಟಿವಿಗಳನ್ನು ಜಾಲಾಡುತ್ತಿದ್ದಾರೆ. ವಶಕ್ಕೆ ಪಡೆದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಈವರೆಗೆ ನಿಖರ ಕಾರಣಕ್ಕೆ ಪ್ರವೀಣ್ ಕೊಲೆಯಾಗಿದೆ ಎಂದು ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಓರ್ವ ಆರೋಪಿ ವಶಕ್ಕೆ