CrimeDakshina KannadaDistrictsKarnatakaLatestLeading NewsMain Post

ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ

Advertisements

ಮಂಗಳೂರು: ನನ್ನ ಮಗ ಕಷ್ಟಪಟ್ಟು ಸ್ಕೀಮ್ ಬ್ಯುಸಿನೆಸ್ ಅನ್ನು ಶುರುಮಾಡಿದ್ದ. ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ? ಎಂದು ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಸಂಬಂಧ ಬಂಧಿತನಾಗಿರುವ ಝಾಕೀರ್ ತಾಯಿ ಮೈಮುನಾ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೈಮುನಾ, ನನ್ನ ಮಗ ನಿರಪರಾಧಿಯಾದಿ ಕೊಲೆ ಮಾಡಿಲ್ಲ. ನಮ್ಮ ಮನೆಗೆ ಅಂದು ನೆಂಟರು ಬಂದಿದ್ದರು. ಕೋಳಿ ತೆಗೆದುಕೊಂಡು ಬರಲು ಝಾಕೀರ್ ಅಂಗಡಿಗೆ ಹೋಗಿದ್ದ. ನಮ್ಮ ಪರಿಚಯದ ಪೊಲೀಸರೇ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಓರ್ವ ಆರೋಪಿ ವಶಕ್ಕೆ

ಪೊಲೀಸ್ ಠಾಣೆ ಯಿಂದಲೂ ಒಂದು ಬಾರಿ ಫೋನ್ ಮಾಡಿದ್ದಾನೆ. ನಾನು ತಪ್ಪು ಮಾಡಿಲ್ಲ ಎಂದು ನಮಗೆ ಧೈರ್ಯ ಹೇಳಿ ಹೋಗಿದ್ದಾನೆ. ಅವನೇ ಆರೋಪಿ ಎಂದು ಹೇಳುವುದು ನಮಗೆ ಬೇಸರವಾಗಿದೆ ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಮಾತನಾಡಿದ್ದ ಝಾಕೀರ್ ಪತ್ನಿ, ನನ್ನ ಪತಿಯನ್ನು ಬಿಟ್ಟು ಬಿಡಿ. ನನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ. ನನ್ನ ಗಂಡ ಝಾಕೀರ್ ನಿರಪರಾಧಿ. ನನ್ನ ಗಂಡನನ್ನು ನನಗೆ ಬಿಟ್ಟುಕೊಡಿ. ನನ್ನ ಗಂಡನನ್ನು ಯಾಕೆ ಜೈಲಿನಲ್ಲಿ ಇಟ್ಟಿದ್ದೀರಿ. ನನ್ನ ಗಂಡ ಏನು ತಪ್ಪು ಮಾಡಿದ್ದಾರೆ ಎಂದು ಪ್ರೂಫ್ ಕೊಡಿ. ಪ್ರೂಫ್ ಕೊಟ್ಟು ನನ್ನ ಗಂಡನನ್ನು ಅರೆಸ್ಟ್ ಮಾಡಿ ಎಂದು ಕಿಡಿಕಾರಿದ್ದರು.

ಏನಿದು ಘಟನೆ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.

ಪ್ರವೀಣ್ ಹತ್ಯೆಯ ಬಳಿಕ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಿದ್ದಾರೆ.

Live Tv

Leave a Reply

Your email address will not be published.

Back to top button