ದುರಾಸೆ ಏನಿಲ್ಲ, ಸ್ವಲ್ಪ ಆಸೆ ಎಂದ ಒಳ್ಳೆ ಹುಡ್ಗ ಪ್ರಥಮ್

Public TV
2 Min Read
pratham

ಬೆಂಗಳೂರು: ಬಿಗ್‍ಬಾಸ್ ರಿಯಾಲಿಟಿ ಶೋ ವಿನ್ನರ್ ಒಳ್ಳೆಯ ಹುಡಗ ಪ್ರಥಮ್ ಯಾವಾಗಲೂ ತಮ್ಮದೇ ಶೈಲಿಯಲ್ಲಿ ಫೇಸ್‍ಬುಕ್ ಪೋಸ್ಟ್ ಹಾಕುತ್ತಿರುತ್ತಾರೆ. ತಾವು ಮಾತನಾಡುವ ಶೈಲಿಯಲ್ಲಿ ಪೋಸ್ಟ್ ಹಾಕಿಕೊಳ್ಳೊದರಿಂದ ಜನರ ಪ್ರೀತಿಗೂ ಪಾತ್ರರಾಗುತ್ತಾರೆ. ಬುಧವಾರ ಯಶ್ ಫೋಟೋ ಹಾಕಿ ‘ನನಗೇನೂ ದುರಾಸೆ ಏನಿಲ್ಲ, ಸ್ವಲ್ಪ ಆಸೆ’ ಅಂತಾ ಬರೆದುಕೊಂಡಿದ್ದಾರೆ.

ಯಶ್ ಸದ್ಯ ಕೆಜಿಎಫ್ ಚಿತ್ರದಲ್ಲಿ ನಟಿಸುತ್ತಿರೋದು ಇಡೀ ಕರುನಾಡಿಗೆ ಗೊತ್ತಿರುವ ವಿಷಯ. ಇದೇ ಚಿತ್ರದ ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಭಟಿಯಾ ಹೆಜ್ಜೆ ಹಾಕರೋದು ಸದ್ಯದ ವಿಷಯ. ಗುರುವಾರ ಕೆಜೆಎಫ್ ಚಿತ್ರತಂಡ ಯಶ್ ಮತ್ತು ತಮನ್ನಾ ಜೊತೆಗಿರುವ ಫೋಟೋವನ್ನು ರಿಲೀಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ಫೋಟೋವನ್ನ ಪ್ರಥಮ್ ಸಹ ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿಕೊಂಡು, ಕೆಲವು ಕ್ಯಾಚಿ ಲೈನ್ ಗಳನ್ನು ಬರೆದಿದ್ದಾರೆ.

yash tamannaah

ಪ್ರಥಮ್ ಬರೆದಿದ್ದೇನು?
ಈ ವ್ಯಕ್ತಿ ಕನ್ನಡ ಉದ್ಯಮವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಸಾಮಥ್ರ್ಯ ಹೊಂದಿದ್ದಾರೆ. ನನಗೆ ಈಯಪ್ಪನ ಆ್ಯಟಿಟ್ಯೂಡ್ ಸಖತ್ ಇಷ್ಟ. ಹೋದ ವರ್ಷ ಇವರ ಯಾವ ಸಿನಿಮಾ ಸಹ ರಿಲೀಸ್ ಆಗಿಲ್ಲ. ಆದ್ರೆ ಈ ವರ್ಷ ಯಶ್ ಅವರು ಕೆಜಿಎಫ್ ರಿಲೀಸ್ ಮಾಡಿದ್ರೆ, ನಮ್ಮ ರಾಧಿಕಾ ಪಂಡಿತ್ ಅವರು ಡಿಸೆಂಬರ್‍ಗೆ ವೈಜಿಎಫ್ ರಿಲೀಸ್ ಮಾಡುತ್ತಿದ್ದಾರೆ. ನನಗೆ ದುರಾಸೆ ಏನಿಲ್ಲ ಗುರು.. ಸಣ್ಣ ಆಸೆ ಅಷ್ಟೆ… ಕೆಜಿಎಫ್ ಭಾಗ 1 ಮತ್ತು 2 ಬರಲಿ.. ವೈಜಿಎಫ್ ಅವಳಿ-ಜವಳಿ ಹುಟ್ಟಲಿ. ಅಷ್ಟೇ.. ಇನ್ನೇನೂ ಆಸೆ ಇಲ್ಲ..!

ಬಿಗ್‍ಬಾಸ್ ನಿಂದಾಗಿ ನಿರ್ದೇಶಕನಾಗಿದ್ದ ಪ್ರಥಮ್ ಇಂದು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆಯಲ್ಲಿಯೇ ಸಾಮಾಜಿಕ ಕಾರ್ಯಗಳಲ್ಲಿಯೂ ಪ್ರಥಮ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

pratham fb

ಭರ್ಜರಿ ಸೆಟ್‍ನಲ್ಲಿ ಬಳ್ಳಿಯ ಮಿಂಚು:
ಬರೋಬ್ಬರಿ 60 ಜನರ ಶ್ರಮದಿಂದ 15 ದಿನದಲ್ಲಿ ತಯಾರಾದ ಬಾರ್ ಸೆಟಪ್ ಸೆಟ್ ನಲ್ಲಿ ಬಳುಕೋ ಬಳ್ಳಿ ತಮನ್ನಾ ಹೆಜ್ಜೆ ಹಾಕಿದ್ದಾರೆ. ದಕ್ಷಿಣ ಭಾರತದ ಫೇಮಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಹೆಜ್ಜೆಯ ಡೈರೆಕ್ಷನ್‍ನಲ್ಲಿ ಮಿಲ್ಕಿಬ್ಯೂಟಿ `ಜೋಕೆ ನಾನು ಬಳ್ಳಿಯ ಮಿಂಚು’ ಎಂದು ಮಿಂಚು ಹರಿಸಿದ್ದಾರೆ. 60-70 ದಶಕದ ಗೆಟಪ್‍ನಲ್ಲಿ ಒಟ್ಟೂ 80 ಜನ ಡ್ಯಾನ್ಸರ್ಸ್ ಇದ್ದಾರೆ. ಕಂಪ್ಲೀಟ್ ರೆಡ್ ಥೀಮ್ ಕಲರ್‍ನಲ್ಲಿ ಪಿಕ್ಟರೈಸೇಷನ್ ಮಾಡಲಾಗಿದ್ದು ಒಟ್ಟೂ 6 ಸಾವಿರಕ್ಕಿಂತ ಹೆಚ್ಚು ರೆಡ್ ಬಲ್ಬ್‍ಗಳು ಸೆಟ್ ನಲ್ಲಿ ಹಾಕಲಾಗಿತ್ತು. ಕಲಾ ನಿರ್ದೇಶಕ ಶಿವಕುಮಾರ್ ಮತ್ತು ತಂಡದ 60 ಜನರ ಕೈಚಳಕವನ್ನು ಈ ಹಾಡಿನಲ್ಲಿ ಕಾಣಬಹುದಾಗಿದೆ.

ಹೊಂಬಾಳೆ ಪ್ರೊಡೆಕ್ಷನ್ ನಲ್ಲಿ ಕೆಜಿಎಫ್ ಸಿನಿಮಾ ನಿರ್ಮಾಣವಾಗುತ್ತಿದ್ದು,’ಜೋಕೆ, ನಾನು ಬಳ್ಳಿಯ ಮಿಂಚು’ ಹಾಡಿನ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದು, ಯಶ್ ಜೊತೆಗಿರುವ ಫೋಟೋ ವೈರಲ್ ಆಗಿದೆ. ಸದ್ಯ ತಮನ್ನಾ ಯಶ್ ಜೊತೆ ಡ್ಯಾನ್ಸ್ ಮಾಡಿದ ಫಸ್ಟ್ ಲುಕ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Yash NEW

“ಯಶ್ ಜೊತೆ ಜೋಕೆ ಹಾಡಿಗೆ ಚಿತ್ರೀಕರಣ ಮಾಡುವಾಗ ಒಳ್ಳೆಯ ಸಮಯ ಕಳೆದಿದ್ದೇನೆ. ಇಡೀ ಚಿತ್ರತಂಡ ನನಗೆ ಮನೆಯ ಅನುಭವವನ್ನು ನೀಡಿತು. ಎಲ್ಲರಿಗೂ ಧನ್ಯವಾದ. ಸದ್ಯ ಎಲ್ಲರೂ ಕೆಜಿಎಫ್ ಚಿತ್ರವನ್ನು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ನೋಡಲು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಭೇಟಿ ನೀಡಿ” ಎಂದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *