– ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಬ್ರಿಗಷ್ಟೇ ಪ್ರಾಮುಖ್ಯತೆ ಸಿಕ್ಕಿದೆ
ಮೈಸೂರು: ಕಾಂಗ್ರೆಸ್‍ಗೆ (Congress) ವೋಟ್ ಹಾಕಿದ್ರೆ ತಾಲಿಬಾನ್ ಸರ್ಕಾರ ಬರತ್ತೆ ಅಂತ ಅವತ್ತೇ ಹೇಳಿದ್ದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಮಂಗಳೂರಿನಲ್ಲಿ (Mangaluru) ನಡೆದ ಸುಹಾಸ್ ಶೆಟ್ಟಿ ( Suhas Shetty) ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇತ್ತೀಚಿಗೆ ನಮ್ಮ ಕೊಡಗಿನ ವಿನಯ್ ಸೋಮಯ್ಯ, ಕಾಂಗ್ರೆಸ್ ಶಾಸಕರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ. ತಾಲಿಬಾನ್ ಸರ್ಕಾರ ಬರುತ್ತೆ ಅಂತ ಅಂದೇ ಹೇಳಿದ್ದೆ, ಈಗ ಅದೇ ಆಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ಹಿಂದೂಗಳ ಸರಣಿ ಹತ್ಯೆಗಳು ಶುರುವಾಗಿದೆ. ಈಗ ಅದು ಮುಂದುವರೆದಿದೆ. ಸಿದ್ದರಾಮಯ್ಯ ಸರ್ಕಾರ ತೆಗೆಯುವವರೆಗೆ ಇದು ನಿಲ್ಲಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಬ್ರಿಗಷ್ಟೇ ಪ್ರಾಮುಖ್ಯತೆ ಸಿಕ್ಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುರುವಾರ ಬಜ್ಪೆಯ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಬರ್ಬರ ಹತ್ಯೆ ನಡೆದಿತ್ತು. ಸುರತ್ಕಲ್‍ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ರಾತ್ರಿ ಹೊಂಚು ಹಾಕಿ ಸುಮಾರು 10 ಮಂದಿ ಸೇರಿ ತಲವಾರಿನಿಂದ ಹತ್ಯೆ ಮಾಡಿದ್ದರು. ಮಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದರ ನಡುವೆಯೂ ದುಷ್ಕರ್ಮಿಗಳು ಮೂವರಿಗೆ ಚಾಕು ಇರಿದು ಅಟ್ಟಹಾಸ ಮೆರೆದಿದ್ದಾರೆ.