ಮೈಸೂರು: ವಿಧಾನಸೌಧದ ಕಟ್ಟಡದಲ್ಲಿ ವಾಸ್ತು ದೋಷವಿದೆ. ಸಿಎಂ ಬಿಟ್ಟು ಉಳಿದ 223 ಜನರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ಇದೇ ಕಾರಣಕ್ಕೆ ಇಂತಹ ಮಾತುಗಳು ಕೇಳಿ ಬರುತ್ತವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರಿಗೆ ಮಂಡಿ ನೋವು ಎಂದು ಸಿಎಂ ಬದಲಾಯಿಸಲು ಸಾಧ್ಯವಿಲ್ಲ. ಮಂಡಿ ನೋವಿಗೆ ಚಿಕಿತ್ಸೆ ಕೊಡಿಸುತ್ತೇವೆ ಹೊರತು ಸಿಎಂ ಬದಲಾಯಿಸುವುದಿಲ್ಲ ಎಂದ ಅವರು, ಮಾಜಿ ಪ್ರಧಾನಿ ವಾಜಪೇಯಿ ಅವರ ಉದಾಹರಣೆ ನೀಡಿದರು. ವಾಜಪೇಯಿ ಅವರಿಗೆ ಎರಡು ಮಂಡಿ ನೋವಿತ್ತು. ಆದರೂ ಪ್ರಧಾನಿಯನ್ನು ಬದಲಿಸಲಿಲ್ಲ. ಅಂತಹದರಲ್ಲಿ ನಾವು ಸಿಎಂ ಬದಲಾಯಿಸುತ್ತೇವಾ..? ಇದೆಲ್ಲಾ ಕೇವಲ ಊಹಾಪೋಹ ಅಷ್ಟೇ ಎಂದು ಹೇಳಿದರು.
Advertisement
Advertisement
ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಂಗಾಯಣದಲ್ಲಿ ಬಹುಕಾಲದಿಂದಲೂ ಎಡಚರ ಹಾವಳಿ ಆಗಿತ್ತು. ಇದು ಎಡಪಂಥಿಯರ ಸ್ವತ್ತು ಅನ್ನುವ ರೀತಿಯ ಆಗಿತ್ತು. ಇಂತಹ ಮಾರ್ಕ್ಸ್ ವಾದ, ಟೆರಿಸ್ಟ್ ಮನಸ್ಥಿತಿಯನ್ನು ಬಿಟ್ಟು, ಈ ರೀತಿಯ ಅಪಪ್ರಚಾರ ಮಾಡಬೇಡಿ ಎಂದು ಸಲಹೆ ನೀಡಿದರು.
Advertisement
Advertisement
ರಂಗಾಯಣದಲ್ಲಿ ಎಡಪಂಥ, ಬಲಪಂಥ, ಮಧ್ಯಪಂಥ ಎಲ್ಲದಕ್ಕೂ ಅವಕಾಶ ಸಿಗಬೇಕು ಎಂದ ಅವರು, ರಂಗಾಯಣದ ನಿರ್ದೇಶಕರ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರ ಬೆಂಬಲ ವಿಚಾರವಾಗಿ ಮಾತನಾಡಿ, ಟೆರರಿಸ್ಟ್ ಗಳಿಗೆ ಬೆಂಬಲ ಕೊಟ್ಟವರು. ಅಂತವರು ಇವರಿಗೆ ಬೆಂಬಲ ಕೊಡದೆ ಇರುತ್ತಾರಾ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಜಾರ್ಖಂಡ್‍ನಲ್ಲಿ ಪೆಟ್ರೋಲ್ ದರ 25 ರೂ. ಇಳಿಕೆ – ದ್ವಿಚಕ್ರ ವಾಹನಗಳಿಗೆ ಮಾತ್ರ ಈ ಆಫರ್!
ಎಲ್ಲಾ ದೇಶ ವಿರೋಧಿ ಚಟುವಟಿಕೆ ಹಿಂದೆ ಕಾಂಗ್ರೆಸ್ ಇರುತ್ತದೆ. ಅಡ್ಡಂಡ ಕಾರ್ಯಪ್ಪ ಬಂದ ಮೇಲೆ ರಂಗಾಯಣ ಕ್ರಿಯಾಶೀಲವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪರ ವಹಿಸಿದರು. ಇದನ್ನೂ ಓದಿ: ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆಯೇ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ!
ಮತಾಂತರ ಕಾಯ್ದೆ ಜಾರಿಗೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಜನರನ್ನು ಮಂಗನನ್ನಾಗಿ ಮಾಡುವ ಮತಾಂತರಕ್ಕೆ ಬ್ರೇಕ್ ಹಾಕಲಾಗಿದೆ. ಚಿಕಿತ್ಸೆ ಕೊಡಿಸಿ ರೋಗ ವಾಸಿ ಮಾಡಿಸುತ್ತಾರೆ. ನಂತರ ಏಸುವಿನ ಪ್ರಾರ್ಥನೆ ಮಾಡಿಸುತ್ತಾರೆ. ಏಸುವಿನಿಂದ ಗುಣ ಆಯ್ತು ಅಂತಾ ಮೋಸದಿಂದ ಮತಾಂತರ ಮಾಡಿಸುತ್ತಾರೆ. ಹಾಗಾದರೆ ಎಲ್ಲಾ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿ, ಬರೀ ಏಸುವಿನ ದೇವಾಲಯ ಕಟ್ಟಿಸಬಹುದು ಎಂದ ಅವರು, ಫಾದರ್ ಸೇರಿ ಕಾಯ್ದೆ ವಿರೋಧಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣ’
ಯೂರೋಪಿಯನ್ ದೇಶಗಳಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದೆ. ಅಲ್ಲಿ ಚರ್ಚ್ ಗಳಿಗೆ ಯಾರೂ ಹೋಗುತ್ತಿಲ್ಲ. ಚರ್ಚ್ ಗಳು ಅಲ್ಲಿ ಮಾರಾಟಕ್ಕಿವೆ. ಅದಕ್ಕಾಗಿ ಇಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನವೇ ಮತಾಂತರವಾಗಿದೆ ಎಂದರು. ಇದನ್ನೂ ಓದಿ: ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರು, ಪತ್ರಕರ್ತರ ಸಂಘದ ಕೊಡುಗೆ ಅನನ್ಯ: ವೇದವ್ಯಾಸ ಕಾಮತ್
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಇಂತಹ ಮನಸ್ಥಿತಿಯಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರವನ್ನು ಜನರು ನೋಡುತ್ತಾರೆ. ಇದು ಜನರಿಗೆ ಗೊತ್ತಿದೆ. ಆದ್ದರಿಂದ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. 2023ರಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಕಾಯ್ದೆಯನ್ನು ವಾಪಸ್ ಪಡೆಯುವ ಅವಕಾಶ ಜನ ನಿಮಗೆ ಕೊಡುವುದಿಲ್ಲ. ಕಾಂಗ್ರೆಸ್ ನಾಯಕರು ಪ್ರತಿ ಬಾರಿ ಹೊಸ ಹೊಸ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಅಧ್ಯಯನ ಶೀಲತೆಯಿಂದ ಪರಿಪೂರ್ಣ ವರದಿಗಾರಿಕೆ ಸಾಧ್ಯ: ಮನೋಹರ್ ಪ್ರಸಾದ್
ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಬರೀ ಹಿಟ್ ಅಂಡ್ ರನ್ ಮಾಡುತ್ತಾರೆ. ಒಂದು ವಿಚಾರ ತೆಗೆದುಕೊಳ್ಳುತ್ತಾರೆ ಅರ್ಧಕ್ಕೆ ಬಿಡುತ್ತಾರೆ. ಮತ್ತೆ ಅಲ್ಲಿಂದ ಓಡಿ ಹೋಗುತ್ತಾರೆ. ಮತಾಂತರ ನಿಷೇಧ ಕಾಯ್ದೆಗೆ ಅವರೇ ಸಹಿ ಹಾಕಿದ್ದರು. ಇಲ್ಲ ಅಂತಾ ಹೇಳಿ ಅಲ್ಲೂ ಸಿಕ್ಕಿಕೊಂಡರು. ನಂತರ ಕಣ್ಣು ತಪ್ಪಿನಿಂದ ಅದು ಇದು ಅಂತಾ ಹೇಳಿದರು. ಸಿದ್ದರಾಮಯ್ಯ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಮಹಾರಾಷ್ಟ್ರಕ್ಕೆ ಹೆದರಿಕೊಳ್ಳುವ ಕಾಂಗ್ರೆಸ್‌ನಿಂದ ನಮಗೆ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.