ಮೈಸೂರು: ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ (Bus stand) ನಿರ್ಮಿಸುವಂತಿಲ್ಲ. ನಿರ್ಮಿಸಿದರೆ ಅದನ್ನು ಒಡೆಸಿ ಹಾಕೊದು ಗ್ಯಾರೆಂಟಿ ಎಂದು ಸಂಸದ ಪ್ರತಾಪ ಸಿಂಹ (Pratap Simha) ಎಚ್ಚರಿಕೆ ನೀಡಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮೈಸೂರಿನ (Mysuru) ಊಟಿ ರಸ್ತೆಯ ಬಸ್ ನಿಲ್ದಾಣದ ಮೇಲೆ ಗುಂಬಜ್‍ಗಳು ಇರುವುದನ್ನು ಗಮನಿಸಿದ್ದೇನೆ. ಮಧ್ಯದಲ್ಲಿ ದೊಡ್ಡ ಗುಂಬಜ್ ಅಕ್ಕ ಪಕ್ಕ ಚಿಕ್ಕ ಗುಂಬಜ್‍ಗಳಿದ್ರೆ ಅದು ಮಸೀದಿನೇ. ಕೆಆರ್ ಐಡಿಎಲ್ ಇಂಜಿನಿಯರ್‌ಗಳಿಗೆ ಹೇಳಿದ್ದೇನೆ. ಮೂರು, ನಾಲ್ಕು ದಿನ ಟೈಮ್ ಕೊಟ್ಟಿದ್ದೇನೆ. ಇಲ್ಲವಾದ್ರೆ ಜೆಸಿಬಿ (JCB) ತಂದು ನಾನೇ ಒಡೆದು ಹಾಕುತ್ತೇನೆ ಎಂದು ತಿಳಿಸಿದರು.
Advertisement
Advertisement
ಇದೀಗ ಪ್ರತಾಪ್ ಸಿಂಹ ನೀಡಿರುವ ವಾರ್ನಿಂಗ್ ಬೆನ್ನಲ್ಲೇ ಅಧಿಕಾರಿಗಳು ತಕ್ಷಣ ಈ ಗುಂಬಜ್‍ಗಳ ಮೇಲೆ ಕಳಸದ ಮಾದರಿಯನ್ನು ಕೂರಿಸಿದ್ದಾರೆ. ಇದನ್ನೂ ಓದಿ: ಮುಂದಿನ ವಾರದಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ: ಹೆಚ್.ಡಿ ದೇವೇಗೌಡ
Advertisement
Advertisement
ಇನ್ನೂ ಟಿಪ್ಪು ನಿಜ ಕನಸು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಜಲಿಂಗಪ್ಪನವರ ಕಾರ್ ಡ್ರೈವರ್ ಆಗಿದ್ದ ಜಾಫರ್ ಶರೀಫ್ ಎಂಬ ವ್ಯಕ್ತಿ ರೈಲಿಗೆ ಟಿಪ್ಪು ಎಕ್ಸ್‍ಪ್ರೆಸ್ ಎಂದು ನಾಮಕರಣ ಮಾಡಿದರು. ಕಳ್ಳ ಕಿವಿ ಇಟ್ಟುಕೊಂಡು ಇಂದಿರಾಗಾಂಧಿ ಬಳಿ ಹೋಗಿ ಮಾಹಿತಿ ಕೊಟ್ಟು ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟಿಸಿಕೊಂಡು ಗೆದ್ದು ರೈಲ್ವೆ ಸಚಿವರಾದರು. 1980ರಲ್ಲಿ ಟಿಪ್ಪು ಎಕ್ಸ್‍ಪ್ರೆಸ್ ಪ್ರಾರಂಭ ಮಾಡುತ್ತಾರೆ ಎಂದ ಅವರು, ರೈಲ್ವೆ ಸ್ಟೇಷನ್‍ಗೆ ಚಾಮರಾಜ ಒಡೆಯರ್ ಹೆಸರು ಇಡುತ್ತೇವೆ ಹೊರತು ಟಿಪ್ಪುವಿನ ಯಾವ ಗುರುತುಗಳು ಸಿಗದ ಹಾಗೇ ಮಾಡುತ್ತೇವೆ ಎಂದರು. ಇದನ್ನೂ ಓದಿ: ನಾಪತ್ತೆಯಾಗಿದ್ದ ದೇಗುಲ ಮಠದ ಮೂವರು ವಿದ್ಯಾರ್ಥಿಗಳು ವಾಪಸ್