DistrictsKarnatakaLatestMain PostRamanagara

ನಾಪತ್ತೆಯಾಗಿದ್ದ ದೇಗುಲ ಮಠದ ಮೂವರು ವಿದ್ಯಾರ್ಥಿಗಳು ವಾಪಸ್

ರಾಮನಗರ: ಕನಕಪುರದಲ್ಲಿರುವ (Kanakapura) ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಿಂದ ನಾಪತ್ತೆ ಆಗಿದ್ದ ಮೂವರು ಮಕ್ಕಳು (Student) ಮರಳಿ ಬಂದಿದ್ದಾರೆ.

ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದ ಅನೀಲ್ ಕುಮಾರ್ ಅವರ ಪುತ್ರ ಶಿವಕುಮಾರ್(15), ಬೆಂಗಳೂರಿನ ಬಿಡಿಎ ಲೇಔಟ್ ನಿವಾಸಿ ಮಹದೇವ್ ಎಂಬುವವರ ಪುತ್ರ ಕಾರ್ತಿಕ್(15), ಅತ್ತಿಬೆಲೆ ತಾಲೂಕಿನ ಕೊಡ್ಲಿಪುರ ಗ್ರಾಮದ ಮಂಜುನಾಥ್ ಎಂಬುವವರ ಪುತ್ರ ಪ್ರತಾಪ್ (16) ಎಂಬ ಮೂವರು ನಾಪತ್ತೆಯಾದ ವಿದ್ಯಾರ್ಥಿಗಳಾಗಿದ್ದರು.

 ನಾಪತ್ತೆಯಾಗಿದ್ದ ದೇಗುಲ ಮಠದ ಮೂವರು ವಿದ್ಯಾರ್ಥಿಗಳು ವಾಪಸ್

ಕನಕಪುರ ಟೌನ್‍ನಲ್ಲಿರುವ ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನ. 8ರಂದು ಎಂದಿನಂತೆ ಹಾಸ್ಟೆಲ್‍ನಲ್ಲಿ ತಿಂಡಿ ಮುಗಿಸಿ ಅದೇ ಆವರಣದ ಶಾಲೆಗೆ ಎಲ್ಲಾ ಮಕ್ಕಳು ತೆರಳಿದ್ದರು. ಎಲ್ಲಾ ಮಕ್ಕಳಂತೆ 9ನೇ ತರಗತಿಯ ಈ ಮೂವರು ವಿದ್ಯಾರ್ಥಿಗಳು ಹಾಸ್ಟೆಲ್‍ನಿಂದ ಶಾಲೆಗೆ ಹೊಗಿದ್ದರು. ಆದರೆ ಆ ಮೂವರು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿರಲಿಲ್ಲ. ಇದನ್ನೂ ಓದಿ: ದೇಗುಲ ಮಠದ ಮೂವರು ವಿದ್ಯಾರ್ಥಿಗಳು ನಾಪತ್ತೆ‌- ದೂರು ನೀಡಿದ ವಾರ್ಡನ್

ಈ ಪ್ರಕರಣಕ್ಕೆ ಸಂಬಂಧಿಸಿ ನ. 11 ರಂದು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ವಾರ್ಡನ್ (Warden) ದೂರು ನೀಡಿದ್ದರು. ಅಷ್ಟೇ ಅಲ್ಲದೇ ಈ ಸುದ್ದಿ ಮಾಧ್ಯಮಗಳಲ್ಲೂ ಬಿತ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಮೂವರು ವಿದಾರ್ಥಿಗಳು ಮರಳಿ ಮಠದ ವಸತಿ ಶಾಲೆಗೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಈ ವಿದ್ಯಾರ್ಥಿಗಳು ತಾವು ಮೂವರು ಸ್ನೇಹಿತರ ಮನೆಗೆ ತೆರಳಿದ್ದೆವು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ವಾಪಸ್‌ ಆದ ಹಿನ್ನೆಲೆಯಲ್ಲಿ ಮಠದ ಸಿಬ್ಬಂದಿ ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ

Live Tv

Leave a Reply

Your email address will not be published. Required fields are marked *

Back to top button