ಮೈಸೂರು: ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ಹಠ ಹಿಡಿದು ಟಿಪ್ಪು ಜಯಂತಿ ಆಚರಣೆ ಮಾಡಿದ ಕಾರಣ ಅವರು ಮೈಸೂರಿನಲ್ಲಿ ನೆಲೆ ಕಳೆದುಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಯಮಾಲಾ, ಜಮೀರ್ ಅಹಮದ್ ಅವರು ಏನೂ ಹೇಳುತ್ತಾರೆ ಅದನ್ನು ಸಿಎಂ ಕುಮಾರಸ್ವಾಮಿ ಅವರು ಕೇಳಬಾರದು. ಭಕ್ತಿ ಭಾವದಿಂದ ದಸರಾ ಮಾಡುತ್ತಾರೆ. ಆದರೆ ತನ್ನ ಆಡಳಿತದಲ್ಲಿ ಟಿಪ್ಪು ದಸರಾ ಆಚರಣೆಯನ್ನು ಬಲಿ ತೆಗೆದುಕೊಂಡ. ಅಂತಹ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬೇಕಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಹಠ ಮಾಡಿ ಟಿಪ್ಪು ಜಯಂತಿ ಮಾಡಿದ್ದಕ್ಕೆ ಮೈಸೂರಲ್ಲಿ ಅವರು ನೆಲೆ ಕಳೆದುಕೊಂಡರು ಎಂದು ಹೇಳಿದರು.
Advertisement
Advertisement
ಇದೇ ವೇಳೆ ಟಿಪ್ಪು ಜಯಂತಿ ಆಚರಣೆ ಮಾಡುವುದಾದರೆ ನನ್ನ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಬೇಡಿ. ಆಗೊಮ್ಮೆ ನನ್ನ ಹೆಸರು ಹಾಕಿದ್ದೆ ಆದರೆ ನಾನೂ ಅಲ್ಲಿ ಬಂದು ಟಿಪ್ಪುವಿನ ಬಗ್ಗೆ ನಿಜಾಂಶ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬೇಡಿ ಎಂದು ಕೊಡಗು, ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆರುವುದಾಗಿ ಸ್ಪಷ್ಟಪಡಿಸಿದರು.
Advertisement
ಟಿಪ್ಪು ಸುಲ್ತಾನ್ ಕನ್ನಡಕ್ಕೆ ಕೊಡುಗೆ ನೀಡಿದ ಯಾವುದಾದರು ಒಂದು ಕೊಡುಗೆಯನ್ನು ನೀಡಿದ ಒಂದು ಉದಾಹರಣೆ ನೀಡಲಿ. ನಾನು ಮೈಸೂರಿನ ಮಹಾರಾಜರು ಕನ್ನಡಕ್ಕೆ ನೀಡಿದ 1 ಸಾವಿರ ಉದಾಹರಣೆಗಳನ್ನು ನೀಡುತ್ತೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಕುರಿತು ಮಾಹಿತಿ ಪಡೆಯಬೇಕು. ಏಕೆಂದರೆ ಹಿಂದುಳಿದವರಿಗೆ ಬೆಂಬಲ ನೀಡಲು ಮೈಸೂರು ಮಹಾರಾಜರು ಮೀಸಲಾತಿ ನೀಡಿದ್ದರು. ಅದ್ದರಿಂದಲೇ ಮೈಸೂರು ಪ್ರದೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಆಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಾವೆಲ್ಲಾ ಸರ್ಕಾರದೊಂದಿಗೆ ಸೇರಿ ವಾಲ್ಮೀಕಿ ಜಯಂತಿ ಮಾಡಿದ್ದೇವು. ಅದಕ್ಕೆ ಯಾವುದೇ ಪೊಲೀಸ್ ಭದ್ರತೆ ಅವಶ್ಯತೆ ಇರಲಿಲ್ಲ. ಆದರೆ ಟಿಪ್ಪು ಜೀವನ ಸಮಾಜಕ್ಕೆ ಹೇಳಿಕೊಳ್ಳುವಂತಹದಲ್ಲ ಎಂದು ಕಿಡಿಕಾರಿದ್ದರು.
Advertisement
ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವ ಮೊದಲು ರಾಜ್ಯ ಸರ್ಕಾರ ಕೊಡಗು ಜನತೆಗೆ ಉತ್ತರ ನೀಡಬೇಕು. ಆಚರಣೆ ಆರಂಭದಾಗನಿಂದ ನಾವು ಇದಕ್ಕೆ ಅಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ. ಕೊಡಗಿನಲ್ಲಿ ಟಿಪ್ಪು ಅಕ್ರಮಣಕಾರಿ ದಾಳಿಗೆ ನಡೆದ ಮರಣಹೋಮಕ್ಕೆ ಇಂದಿಗೂ ಸಾಕ್ಷಿ ಇದೆ. ಇಂದಿಗೂ ಅಲ್ಲಿನ ನಾಯಿಗಳಿಗೆ ಟಿಪ್ಪು ಎಂದು ಹೆಸರಿಡುತ್ತಾರೆ. ಅಂತಹ ಆಕ್ರೋಶ ಜನರಲ್ಲಿ ಇದೆ. ಅಲ್ಲದೇ ಮೇಲುಕೊಟೆಯ ಪೂಜಾರಿಗಳು ಇಂದಿಗೂ ದೀಪಾವಳಿ ಆಚರಣೆ ಮಾಡುವುದಿಲ್ಲ. ಏಕೆಂದರೆ ದೀಪಾವಳಿ ದಿನದಂದೇ 200 ವರ್ಷಗಳ ಹಿಂದೆ ದಾಳಿ ನಡೆಸಿ ಮರಣಹೋಮ ಮಾಡಿದ್ದರು. ಎಲ್ಲದಕ್ಕೂ ಸಾಕ್ಷಿ ಇಂದಿಗೂ ಇದೆ. ಅದ್ದರಿಂದ ದೇಶಕ್ಕೆ, ಕನ್ನಡ ನಾಡಿನ ಜನತೆಗೆ ಕೊಡುಗೆ ನೀಡಿದ್ದ ನಾಯಕರ ಜಯಂತಿ ಆಚರಣೆ ಮಾಡಿ ಎಂದು ಸಲಹೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv