ಮೈಸೂರು: ಈ ಬಾರಿ ಲೋಕಸಭೆಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿಗಳಿಗೆ ಇವತ್ತು ಸಂಸದ ಪ್ರತಾಪ್ ಸಿಂಹ ತಿರುಗೇಟಿನ ರೂಪದಲ್ಲಿ ಉತ್ತರ ನೀಡಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರಿಗೆ ಶಾಸಕನ ಬಗ್ಗೆ ಋಣಾತ್ಮಕ ಅಭಿಪ್ರಯ ಇದ್ದರೆ ಹಾಗೂ ಜನರು ಹೇಳುವ ಕೆಲಸ ಕಾರ್ಯಗಳನ್ನು ನೆರವೇರಿಸದೇ ಇದ್ದು, ವಿಶ್ವಾಸ ಕಳೆದುಕೊಂಡರೆ ಮಾತ್ರ ಜನರು ಶಾಸಕನನ್ನು ಬದಲಾಯಿಸುತ್ತಾರೆ. ಆದರೆ ನಾನು ಸಂಸದನಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆದ್ದರಿಂದ ನಾನೇ ಈಗ ಮೈಸೂರು ಕ್ಷೇತ್ರದ ಎಂಪಿಯಾಗಿದ್ದೇನೆ. ಮುಂದೆಯೂ ನಾನೇ ಎಂಪಿಯಾಗಿರುತ್ತೇನೆ. ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಅಲ್ಲಿ ಎಲ್ಲಿಯೂ ಆಗದ ಚರ್ಚೆ ಇಲ್ಲಿ ಯಾಕೆ ನಡೆಯುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ. ಯದುವಂಶದ ಮಹಾರಾಜ ಯದುವೀರ್ ಚುನಾವಣೆಗೆ ನಿಲ್ಲುತ್ತಾರೆ ಎಂದು ಕೆಲವರು ಬರೆಯುತ್ತಾರೆ. ಅವರು ಚುನಾವಣೆಗೆ ನಿಲ್ಲುತ್ತಾರಾ ಇಲ್ಲವ ಎಂದು ನೀವೇ ಅವರ ಬಳಿ ಹೋಗಿ ಕೇಳಿ ಸುದ್ದಿ ಬರೆಯಿರಿ ಎಂದರು.
Advertisement
ವಿರೋಧಿಗಳ ಮನಸ್ಸಿನಲ್ಲಿ ಕೆಲವು ಆಸೆ ಆಕಾಂಕ್ಷೆಗಳು ಇರುತ್ತವೆ. ಮೈಸೂರು ಕೊಡಗಿನ ಜನ ನನ್ನ ಜೊತೆ ಇರೋವರೆಗೆ ನನ್ನ ಟಿಕೆಟ್ ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪ ನವರು ನನ್ನ ಜೊತೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews